30.8 C
Udupi
Saturday, April 25, 2026
spot_img
spot_img
HomeBlogಮಕ್ಕಳನ್ನು ಸಾಧಕರನ್ನಾಗಿ ಮಾಡಬೇಕು: ಶ್ರೀ ಗೋಪಾಡ್ಕರ್

ಮಕ್ಕಳನ್ನು ಸಾಧಕರನ್ನಾಗಿ ಮಾಡಬೇಕು: ಶ್ರೀ ಗೋಪಾಡ್ಕರ್

ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಸ್ವರೂಪ ಶಿಕ್ಷಣ ಸಂಸ್ಥೆಯ ಚಟುವಟಿಕೆಗಳ ಪರಿಚಯ ಕಾರ್ಯಕ್ರಮ

ಸಮಯ ಮತ್ತು ವಿಷಯಗಳ ಮಿತಿಯನ್ನು ಮೀರಿ ಮಕ್ಕಳು ಬೆಳೆಯಬೇಕು.ವಿಶೇಷ ಪರಿಶ್ರಮದಿಂದ ಮಕ್ಕಳು ವಿಶೇಷ ಸಾಧನೆಯನ್ನು ಮಾಡಲು ಸಾಧ್ಯ ಎಂದು ಮಂಗಳೂರಿನ ಸ್ವರೂಪ ಶಿಕ್ಷಣ ಸಂಸ್ಥೆಯ ಶ್ರೀ ಗೋಪಾಡ್ಕರ್ ಇವರು ಅಭಿಪ್ರಾಯಪಟ್ಟರು.ಇವರು ಮಾಳ ಶ್ರೀ ಗುರುಕುಲ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವರೂಪ ಶಿಕ್ಷಣ ಸಂಸ್ಥೆಯ ಚಟುವಟಿಕೆಗಳ ಪರಿಚಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರು ಒಂದು ತಿಂಗಳಲ್ಲಿ ಹೇಗೆ ಪಾಠವನ್ನು ಮುಗಿಸುವುದು ನೆನಪಿನ ಶಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುವುದರ ಬಗ್ಗೆ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿಗಳ ಪರೀಕ್ಷೆಗೆ ತಯಾರಿ ನಡೆಸುವ ಬಗ್ಗೆ  ತಿಳಿಸಿದರು .ವಿಶ್ವ ದಾಖಲೆ ಮಾಡಲು ಏನೆಲ್ಲ ಪರಿಶ್ರಮ ಮುಖ್ಯ ಮತ್ತು ಜಗತ್ತನ್ನು ಕಂಡುಕೊಳ್ಳಬೇಕು ಎನ್ನುವ ಮಕ್ಕಳ ಜೀವನ ಬರಿಯ ಸರ್ಟಿಫಿಕೆಟಿಗೆ ಸೀಮಿತವಾಗಬಾರದು ಎಂಬುದನ್ನು ವಿವರಿಸಿದರು. ತಮ್ಮ ಜೊತೆಗಿರುವ ಮಕ್ಕಳ ವಿಶ್ವದಾಖಲೆಯ ಸಾಧನೆಯನ್ನು ವಿವರಿಸಿ ಮಕ್ಕಳನ್ನು ಸಾಮರ್ಥ್ಯದ ಸಾಧನೆಯ ಮತ್ತು ಕಲಿಕೆಯ ಉನ್ನತಿಯ ಕಡೆಗೆ ಹೇಗೆ ಸಾಗಬೇಕು ಅದಕ್ಕಾಗಿ  ಯಾವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು  ಎಂಬುದನ್ನು ವಿವರಿಸಿದರು . 40 ಭಾಷೆಯಲ್ಲಿ ಬೇರೆ ಬೇರೆ ರೀತಿಯಲ್ಲಿ ಇರುವ ಕಲಿಕಾ ವಿಧಾನವನ್ನು ತಿಳಿದುಕೊಳ್ಳಬೇಕು . ಚಿತ್ರದ ಮೂಲಕ ಸನ್ನೆಯ ಮೂಲಕ ಹೆಸರನ್ನು ಮೊಬೈಲ್ ನಂಬರ್ ಅನ್ನು ಕಂಡು ಹಿಡಿಯುವುದನ್ನು ಹಾಗೂ ಅವಧಾನ ಕಲೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟರು. 
 ಕಲಿಕೆಗೆ  ಕಾರಣ ಬೇಕು ಎಂಬುದು ಅವರ ಧ್ಯೇಯವಾಗಿತ್ತು ಮಕ್ಕಳು ಎಷ್ಟು ಕಲಿಕೆಯನ್ನು ಸಂತೋಷದಲ್ಲಿ ಸ್ವೀಕರಿಸುತ್ತಾರೋ ಅಷ್ಟು ಅವರ ಮೆದುಳು ಚುರುಕಾಗುತ್ತದೆ ಎಂಬುದನ್ನು ಮನಗಾಣಿಸಿದರು .

ಕೊನೆಯಲ್ಲಿ ಶಾಲೆಯಲ್ಲಿ ಮಕ್ಕಳನ್ನು ತರಬೇತಿಗೊಳಿಸುವ ಬಗ್ಗೆ ಅಧ್ಯಾಪಕರಿಗೆ ಮತ್ತು ಆಡಳಿತ ಮಂಡಳಿಯ ಸದಸ್ಯರಿಗೆ ಮಾರ್ಗದರ್ಶನ ನೀಡಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಗಜಾನನ ಮರಾಠೆ, ಸಂಚಾಲಕರಾದ ಸುಧಾಕರ ಡೋಂಗ್ರೆ,ಕೋಶಾಧಿಕಾರಿಯಾದ ರವೀಂದ್ರ ಜೋಶಿ, ಆಡಳಿತ ಮಂಡಳಿಯ ಸದಸ್ಯರಾದ ರಘುಪತಿ ಕಾಮತ್ ಮತ್ತು ಶ್ರೀಮತಿ ವಸಂತಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಪೂರ್ಣಿಮಾ ಶೆಣೈ ಮತ್ತು ಶಿಕ್ಷಕ ವೃಂದ ,ಪೋಷಕರು ಮತ್ತು ಮಕ್ಕಳು ಉಪಸ್ಥಿತರಿದ್ದರು
ಈ ಕಾರ್ಯಕ್ರಮವನ್ನು ಶಿಕ್ಷಕರಾದ ಶ್ರೀಮತಿ ಸುನಿತಾ ಇವರು ನೆರವೇರಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page