ಕಥೆ (ಭಾಗ- 10)
ಚೇತನ್ ವರ್ಕಾಡಿ

ಮಂಗಳ
ಭಾಗ(10)
✍🏻ಚೇತನ್. ವರ್ಕಾಡಿ…
ಅಲ್ಲ ಡ್ಯಾಡಿ ನಾವು ಹುಡುಗೀನ ನೋಡಿರೋದು ಅಷ್ಟೇ ಇನ್ನೂ ಮಾತುಕತೆ ಮುಗಿದಿಲ್ಲ ಅವಾಗ್ಲೆ ಇದೆಲ್ಲ ಬೇಕಿತ್ತ ಮೊದಲೆ ಆಫೀಸಿನ ಕೆಲ್ಸದ ಬಗ್ಗೆ ತುಂಬಾ ತಲೆ ಕೆಟ್ಪುಹೋಗಿದೆ ಅದರ ಮಧ್ಯೆ ಇದೊಂದು ಕಿರಿ ಕಿರಿ ಎಂದವನೆ ಸೀದಾ ಮನೆಯಿಂದ ಹೊರಟೇಬಿಟ್ಟ.ಲೋ ಮಧು ಚಾ ಕುಡ್ಕೊಂಡು ಹೋಗೊ ಎಂದು ತಾಯಿ ಕರೆದರೂ ಮರು ಮಾತನಾಡದೆ ಕಾರ್ ಹತ್ತಿ ಹೊರಟೇಬಿಟ್ಟ. ಅಲ್ಲ ಕಣ್ರೀ ಈ ಮಧು ಯಾಕ್ರಿ ಈಗೀಗ ಈತರ ಮಾಡ್ತ ಇದ್ದಾನೆ ಯಾವತ್ತೂ ಅವನ ಮುಖದಲ್ಲಿ ಇಷ್ಟೊಂದು ಕೋಪವನ್ನು ನಾನು ನೋಡಿಲ್ಲ ಎಂದು ಸುಗಂಧಿ ಹೇಳಬೇಕಾದರೆ!ಹೂಂ ಕಣೆ ಅಷ್ಟೊಂದು ಮುದ್ದಾಗಿ ಸಾಕಿದ್ದಿ ಅಲ್ವ ಈಗ ಅನುಭವಿಸು ಎಂದು ಮಗನ ಕೋಪವನ್ನು ಹೆಂಡತಿಯಲ್ಲಿ ತೆಗೆದವನೆ ಸೀದಾ ರೂಂ ಒಳಗೆ ನಡೆದ.ಅಲ್ಲ ಇವ್ರಿಬ್ಬರ ಕೋಪಕ್ಕೆ ನನ್ನ ಬಲಿಪಶು ಮಾಡ್ತಿದ್ದಾರ…..?ಎಂದು ಆಲೋಚಿಸುತ್ತಾ ಅಡುಗೆ ಕೋಣೆಯತ್ತ ಮುಖ ಮಾಡಿದಳು…
ಯಶೋಧ ಮತ್ತು ರಾಮಣ್ಣ ಮನೆಯ ಅಂಗಳದಲ್ಲಿ ಕುಳಿತು ಹಲಸಿನ ಹಪ್ಪಳ ರೆಡಿ ಮಾಡುತ್ತಿದ್ದರೆ ಅವರ ಪ್ರೀತಿಯ ಮಗಳು ಮಂಗಳ ಜಗಲಿಯಲ್ಲಿ ಕುಳಿತು ಅದೇನೊ ಆಲೋಚಿಸುತ್ತಿದ್ದಳು.ಕೈ ಕೆಲಸದಲ್ಲಿ ಇದ್ದಂತೆಯೆ ಗಂಡಹೆಂಡತಿಯ ಮಾತುಕತೆಯು ಆರಂಭವಾಯಿತು.ಅಲ್ಲರೀ ಮೊನ್ನೆ ಅದೇನೊ ವಿಷಯ ಹೇಳುತ್ತಿದ್ದಂತೆ ಅರ್ಧಕ್ಕೆ ನಿಲ್ಲಿಸಿ ಬಿಟ್ರಲ್ಲ ಏನ್ರೀ ಅದು ಎಂದು ಹೆಂಡತಿ ಕೇಳುವಾಗ ಓ ಅದಾ ನಮ್ ಮುದ್ದು ಮಗಳಿಗೆ ಒಂದು ಮುದ್ದಾದ ಗಂಡು ಹುಡುಕಿದ್ದೀನಿ ಕಣೆ ಎಂದು ಮಗಳ ಕಡೆ ಮುಖ ತಿರುಗಿಸಿ ಹೇಳಿ ಮಾತು ಮುಗಿಸುವಷ್ಟರಲ್ಲಿ……..?
(ಮುಂದುವರಿಯುವುದು)













