ಕಥೆ (ಭಾಗ-4)
ಚೇತನ್ ವರ್ಕಾಡಿ

. ಹೊಸ ಹೊಸ ಆಲೋಚನೆಗಳು ಸೃಷ್ಟಿಸತೊಡಗಿದವು.ಅವಳ ಮುಖವನ್ನೇ ನೋಡುತ್ತಾ ಹಾಗೆ ಮಾತು ಮೌನವಾಗಿ ಹೋಯಿತು.ರೀ ಸರ್ ಏನಾಯ್ತು ಯಾಕೆ ಕಾರ್ ನಿಲ್ಲಿಸಿಬಿಟ್ರಿ ಏನಾಯ್ತು ಎಂದು ಮಂಗಳ ಕೇಳುತ್ತಿದ್ದಂತೆಯೆ ತನ್ನಣ್ಣೆ ತಾನು ಮರೆತಿದ್ದ ಮಧು ಅದು ಅದು…..ಆಂ ಸುಂದರರಾಯರ ಮನೆ ಯಾವ ಕಡೆ ಬರುತ್ತೆ ಎಂದು ಕೇಳಿದಾಗ!ಓ ನೀವು ಯಜಮಾನ್ರ ಮನೆಗೆ ಹೋಗ್ತಿದ್ದಿರ ಇವತ್ತು ಯಜಮಾನ್ರ ಮಗಳಿಗನ್ನು ನೋಡೋಕೆ ಗಂಡಿನ ಕಡೆಯವರು ಬರುತ್ತಿದ್ದಾರೆ ಅನ್ನೊ ವಿಷಯ ಕೇಳಿ ಊರಿಗೆ ಊರೆ ಸಂಭ್ರಮಿಸುತ್ತಿದೆ ನೀವೂ ಪೇಟೆಯಿಂದ ಬಂದವರ ತರ ಕಾಣ್ತಿರಿ ಇಲ್ನೋಡಿ ಈಗೆ ನೇರ ಹೋಗಿ ಓ ಅಲ್ಲೊಂದು ಕೆರೆ ಕಾಣ್ತಿದೆ ಅಲ್ವ ಅಲ್ಲಿಂದ ನೇರವಾಗಿ ಎಡಕ್ಕೆ ತಿರುಗಿದರೆ ಸೀದಾ ಯಜಮಾನ್ರ ಮನೆಗೆ ಹೋಗಿ ಸೇರ್ತಿರ ಎಂದು ಹೇಳಿದವಳೆ ತಾನು ಆಯ್ತು ತನ್ನ ಕೆಲಸ ಆಯ್ತು ಎನ್ನುತ್ತಾ ತನ್ನ ದಿನಚರಿಯನ್ನು ಮುಂದುವರಿಸಿದಳು ಮಂಗಳ..ಮಧು ಮಂಗಳ ಹೋಗುತ್ತಿದ್ದ ದಾರಿಯನ್ನೇ ನೋಡುತ್ತಿದ್ದ.ಲೋ ಮಧು ಏನಾಯ್ತೊ ನಿನ್ಗೆ ಆ ಹುಡುಗಿ ವಿಳಾಸ ಹೇಳಿದ್ಲು ತಾನೆ ಮತ್ತೆ ಯಾಕೆ ಕನವರಿಸುತ್ತಿದ್ದಿಯ ಗಾಡಿ ಸ್ಟಾಟ್ ಮಾಡೊ ಈಗ್ಲೆ ತುಂಬಾ ಹೊತ್ತಾಯ್ತ್ ಎಂದು ಸೋಮಶೇಖರರಾಯರು ಮಗನನ್ನು ಎಚ್ಚರಿಸಿದಾಗಲೆ ಊಂ ಆಂ ಆಂ ಆಯ್ತು ಡ್ಯಾಡಿ ಎಂದವನೆ ಕಾರನ್ನು ಸ್ಟಾಟ್ ಮಾಡಿ ಸುಂದರರಾಯರ ಮನೆಯತ್ತ ಮುಖಮಾಡಿದ..
ಸುಂದರರಾಯರ ಮನೆಯಲ್ಲಿ ಸಂಭ್ರಮವೊ ಸಂಭ್ರಮ ಸೌಂದರ್ಯ ಯಾವಗ ತನ್ನ ಯುವರಾಜ ಬರುತ್ತಾನೊ ಎಂದು ತುದಿಗಾಲಿನಲ್ಲಿ ಕಾಯುತ್ತಾ ಕುಳಿತಿದ್ದಳು.ಕಾರು ಬಂದು ಸುಂದರರಾಯರ ಮನೆಯನ್ನು ತಲುಪಿತು.ದೂರದಿಂದಲೆ ಅವರನ್ನು ನೋಡಿದ ಸುಂದರರಾಯರು ಗಂಡಿನಕಡೆಯವರನ್ನು ಪ್ರೀತಿಯಿಂದ ಮನೆಯೊಳಕ್ಕೆ ಬರಮಾಡಿಕೊಂಡರು…..
ಖುಷಿ ಖುಷಿಯಾಗಿ ಹುಡುಗಿಯನ್ನು ನೋಡಲು ಮನೆಯಿಂದ ಹೊರಟ ಮಧು ಹುಡುಗಿಯ ಮನೆ ತಲುಪಿದಾಗ ಅದೇನೊ ಆ ಸಂಭ್ರಮ ಅವನಲ್ಲಿ ಕಾಣುತ್ತಿರಲಿಲ್ಲ. ಎರಡು ಕುಟುಂಬಗಳು ಶ್ರೀಮಂತ ಮನೆತನದ ಕುಟುಂಬವಾಗಿತ್ತು.ಇನ್ನೇನು ದೂರದಿಂದ ಸೌಂದರ್ಯ ನಾಚುತ್ತ ಜ್ಯೂಸ್ ಹಿಡಿದುಕೊಂಡು ಬರುತ್ತಿರಬೇಕಾದರೆ……?
(ಮುಂದುವರಿಯುವುದು)













