26.1 C
Udupi
Tuesday, June 30, 2026
spot_img
spot_img
HomeBlogಮಹಾಭಾರತದ ಒಟ್ಟು ಸಾರವೇ ಧರ್ಮ

ಮಹಾಭಾರತದ ಒಟ್ಟು ಸಾರವೇ ಧರ್ಮ

ಮಹಾಭಾರತದಲ್ಲಿ ಎಲ್ಲಾ ಪಾತ್ರಗಳೂ ನಾಯಕರಂತೆ ವಿಜೃಂಭಿಸಿ ಧರ್ಮರಾಯ ಮಾತ್ರ ಮೂಲೆಗುಂಪಾಗುವಂತಾದರೂ ವ್ಯಾಸರು ಮಾತ್ರ ಆತನನ್ನು ರಾಜನನ್ನಾಗಿ ಇಟ್ಟುಕೊಂಡು ಧರ್ಮರಾಜನಾಗಿ ನೋಡಿಕೊಂಡರು. ಮಹಾಭಾರತದ ಒಟ್ಟು ಸಾರವಾಗಿ ನಾವು ನೋಡುವುದು ಧರ್ಮವನ್ನೇ ಆಗಿದೆ ಎಂಬುದಾಗಿ ಡಾ. ವಿನಾಯಕ ಭಟ್ ಗಾಳಿಮನೆಯವರು ಇಲ್ಲಿ ಮಾತನಾಡುತ್ತಾ ತಿಳಿಸಿದರು.


ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕ ಇವುಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷ ಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ಮಹಾಭಾರತ ಭಾವದೀಪ ಎಂಬ ಉಪನ್ಯಾಸ ಮಾಲೆಯ ಷಷ್ಠ ಸೋಪಾನದಲ್ಲಿ ಅವರು ‘ಧರ್ಮ ನಂದನ’ ಎಂಬ ಕುರಿತಾಗಿ ಜೂನ್ ೨೭ರಂದು ಕಾರ್ಕಳದ ಪ್ರಕಾಶ್ ಹೋಟೆಲ್ ಇದರ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧರ್ಮದಿಂದ ಗಳಿಸುವ ಸಕಲ ಸಂಪತ್ತು, ಕೀರ್ತಿ, ಪ್ರತಿಷ್ಠೆಗಳು ಅಶಾಶ್ವತವಾಗಿದ್ದು ಧರ್ಮ ಮಾರ್ಗದಿಂದ ಗಳಿಸುವಂಥಾದ್ದೇ ಶಾಶ್ವತ ಎಂಬುದನ್ನು ಪ್ರತಿಪಾದಿಸಿದ ಧರ್ಮರಾಯ ಯಾವ ಸಂದರ್ಭದಲ್ಲಿಯೂ ಧರ್ಮಪ್ರಜ್ಞೆಯನ್ನು ಬೀಳಲು ಬಿಡದೆ ಅದನ್ನೇ ಬದುಕಾಗಿಸಿಕೊಂಡು ಪಾಂಡವರ ಏಕಸೂತ್ರತೆಯನ್ನೂ ಕಾಪಾಡಿದ. ಸಂಘರ್ಷವೆಂಬ ಬೆಂಕಿಗೆ ತುಪ್ಪ ಸುರಿಯುವ ಕೆಲಸವನ್ನು ದುರ್ಯೋಧನ ಮಾಡುತ್ತಾ ಬಂದರೆ ಅದಕ್ಕೆ ನೀರು ಸುರಿಯುವ ಕಾರ್ಯವನ್ನು ಧರ್ಮರಾಯ ಮಾಡುತ್ತಾ ಬಂದು ಎತ್ತರದಲ್ಲಿ ನಿಲ್ಲುತ್ತಾನೆ ಎಂದರು.
ಡಾ.ನಾ.ಮೊಗಸಾಲೆ, ನಿತ್ಯಾನಂದ ಪೈ, ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ಏರ್ ವೈಸ್ ಮಾರ್ಷೆಲ್ ರಮೇಶ್ ಕಾರ್ಣಿಕ್, ಅಲ್ಲಮಪ್ರಭು ಪೀಠದ ಪ್ರಧಾನ ನಿರ್ದೇಶಕರಾದ ತೆ. ವಿಜಯ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕುಮಾರಿ ಶಾರ್ವರಿ ಪ್ರಾರ್ಥಿಸಿ ಡಾ. ಮಾಲತಿ ಜಿ.ಪೈ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಶ್ರೀಮತಿ ಸುಲೋಚನಾ ಬಿ.ವಿ.ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page