
ಹಾಸನ: ಮೈಸೂರು ರೈಲ್ವೇ ವಿಭಾಗವು ಮಹತ್ವದ ಪ್ರಕಟಣೆಯನ್ನು ಹೊರಡಿಸಿದ್ದು ಅದೇನೆಂದರೆ ಭೂ ಕುಸಿತದಿಂದ ಸ್ಥಗಿತಗೊಂಡಿರುವ ಬೆಂಗಳೂರು-ಮಂಗಳೂರು ನಡುವಣ ರೈಲು ಸಂಚಾರ ಆ. 8ರ ಬಳಿಕವೇ ಪುನರಾರಂಭವಾಗಲಿದೆ ಎಂದು ಮಾಹಿತಿ ನೀಡಿದೆ.
ಸಕಲೇಶಪುರ ತಾಲೂಕು ಎಡ ಕುಮೇರಿ ಮತ್ತು ಕಡಗರವಳ್ಳಿ ರೈಲು ನಿಲ್ದಾಣಗಳ ನಡುವೆ ರೈಲು ಹಳಿ ಪಕ್ಕ ಭೂ ಕುಸಿತ ಉಂಟಾಗಿರುವುದರಿಂದ ಬೆಂಗಳೂರು-ಮಂಗಳೂರು ನಡುವೆ 12 ರೈಲುಗಳ ಸಂಚಾರವನ್ನು ಜು. 27ರಿಂದ ರದ್ದು ಪಡಿಸಲಾಗಿದ್ದು, ಆ. 8ರ ವರೆಗೆ ಮುಂದುವರಿಯಲಿದೆ.
ಭೂ ಕುಸಿತದ ಸ್ಥಳದಲ್ಲಿ ರಕ್ಷಣೆಯ ತಡೆಗೋಡೆನಿರ್ಮಾಣದ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಹಳಿ ಸರಿಪಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಗೂಡ್ಸ್ ಎಂಜಿನ್ ಅನ್ನು ಪರೀಕ್ಷಾರ್ಥವಾಗಿ ಚಲಾಯಿಸ ಲಾಗಿದೆ. ಆದರೆ ಪ್ರಯಾಣಿಕರ ರೈಲು ಸಂಚಾರಕ್ಕೆ ಸುರಕ್ಷಾ ಕ್ರಮಗಳ ಪ್ರಕ್ರಿಯೆ ನಡೆಯಬೇಕಾಗಿದೆ. ಹಾಗಾಗಿ ಆ. 8ರ ವರೆಗೂ ರೈಲು ಸಂಚಾರ ಇರುವುದಿಲ್ಲ ಎಂದು ರೈಲ್ವೇ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ













