ಕುಂದಾಪ್ರ ಕನ್ನಡ ಎನ್ನುವುದು, ಒಂದು ಭಾಷಾ ಪ್ರಭೇದ ಅಲ್ಲ,ಸುಂದರ ಸಂಸ್ಕೃತಿ ,ಆಚಾರ-ವಿಚಾರ ಮತ್ತು ಸಂಪ್ರದಾಯಗಳ ಒಟ್ಟುಗೂಡುವಿಕೆ: ಮನು ಹಂದಾಡಿ

ಕಾರ್ಕಳ : ಕುಂದಾಪ್ರ ಕನ್ನಡವೆನ್ನುವುದು ಕೇವಲ ಒಂದು ಭಾಷಾ ಪ್ರಭೇದ ಮಾತ್ರ ಅಲ್ಲ ಅದೊಂದು ಸುಂದರವಾದ ಸಂಸ್ಕೃತಿ ವಿಶಿಷ್ಟವಾದ ಆಚಾರ- ವಿಚಾರ ಮತ್ತು ಸಂಪ್ರದಾಯಗಳನ್ನು ಇದು ಪ್ರತಿನಿಧಿಸುತ್ತದೆ. ಕುಂದಾಪುರದವರು ಕೈಮುಗಿಯುವ ಎಂದ ಮನುಹಂದಾಡಿಯವರು “ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯು ಇಷ್ಟು ಪ್ರಚಾರ ಹಾಗೂ ಪ್ರಸುದ್ದಿ ಪಡೆಯುವಲ್ಲಿ ಮಾಧ್ಯಮದ ಪಾತ್ರ ಬಹಳ ಇದೆ ಎಂದರು.
ಅವರು ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಘಟಕ ಮತ್ತು ಕಾರ್ಕಳದ ಕುಂದಾಪ್ರದವರು ಆಯೋಜಿಸಿದ “ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆಯಲ್ಲಿ ಭಾಷಿಯಲ್ಲ ಬದ್” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಮೂಡುಬಿದಿರೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ ಬೈಂದೂರು ಭಾಷಾಭಿಮಾನದೊಂದಿಗೆ ಪ್ರಕೃತಿ ಪ್ರೇಮವನ್ನು ಬೆಳೆಸಿಕೊಳ್ಳಬೇಕು ಎಂದರು.ಕಾರ್ಯಕ್ರಮದ ಉದ್ಘಾಟಕರಾಗಿ, ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ಸ್ ಓನರ್ಸ್ ಅಸೋಸಿಯೇಷನ್ ಇದರ ರಾಜ್ಯಾಧ್ಯಕ್ಷರಾದ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ವಹಿಸಿದ್ದರು.ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಆಶಯ ಭಾಷಣ ಮಾಡಿದರು. ಪುರಸಭೆಯ ನಿವೃತ್ತಿ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ರಂಗ ಸಂಸ್ಕೃತಿ ಕಾರ್ಕಳದ ಅಧ್ಯಕ್ಷ ನಿತ್ಯಾನಂದ ಎಸ್ ಪೈ ಉಪಸ್ಥಿತರಿದ್ದರು.ಕೊಂಡಳ್ಳಿ ಪ್ರಭಾಕರ ಶೆಟ್ಟಿ ಪ್ರಸ್ತಾಪಿಸಿದರು. ರಾಜಾರಾಮ್ ಶೆಟ್ಟಿ ವಂದಿಸಿದರು ಶಿಕ್ಷಕಿ ಗೀತಾ ನಿರೂಪಿಸಿದರು














