
ಬೆಂಗಳೂರು: ನಟ ಕಿಶೋರ್ ಕುಮಾರ್ ಚಿನ್ನ ಖರೀದಿ, ಪೆಟ್ರೋಲ್ ಹಾಗೂ ಡೀಸೆಲ್ ಬಳಕೆ, ವಿದೇಶಿ ಪ್ರವಾಸ ಮಿತಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಸಲಹೆಯನ್ನು ವ್ಯಂಗ್ಯವಾಗಿ ಟೀಕಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಸರ್ಕಾರ ದೇಶದ ಕಾಡುಗಳನ್ನು ಮಾರಾಟ ಮಾಡಿ ಪರಿಸರ ಹಾನಿಗೆ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಜನರು ಉಸಿರಾಟವನ್ನೇ ಕಡಿಮೆ ಮಾಡಿ ದೇಶಭಕ್ತಿ ತೋರಿಸಬೇಕು ಎಂದು ಹೇಳುವ ಸ್ಥಿತಿ ಬರಬಹುದು ಎಂದು ಅಣಕಿಸಿದ್ದಾರೆ.
ಕಿಶೋರ್ ಕುಮಾರ್ ಅವರ ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಸರ್ಕಾರದ ವಿರುದ್ಧದ ಅತಿರೇಕದ ಟೀಕೆ ಎಂದು ಅಭಿಪ್ರಾಯಪಟ್ಟರೆ, ಮತ್ತಿತರರು ಯುದ್ಧ ಪರಿಸ್ಥಿತಿಯಲ್ಲಿ ಮುನ್ನೆಚ್ಚರಿಕೆ ಅಗತ್ಯ ಎಂದು ಸಮರ್ಥಿಸಿದ್ದಾರೆ. ಸಾರ್ವಜನಿಕರು ಸಂಕಷ್ಟದ ಸಮಯದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಕೆಲ ನೆಟ್ಟಿಗರು ಕಿಶೋರ್ ಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.



























