27.6 C
Udupi
Wednesday, March 19, 2025
spot_img
spot_img
HomeBlogಪ್ರಜ್ವಲ್ ರೇವಣ್ಣ ಜೆ ಡಿ ಎಸ್ ನಿಂದ ಅಮಾನತು

ಪ್ರಜ್ವಲ್ ರೇವಣ್ಣ ಜೆ ಡಿ ಎಸ್ ನಿಂದ ಅಮಾನತು

ಬೆಂಗಳೂರು: ಆರೋಪಗಳ ಹಿನ್ನೆಲೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.ಈ ಕುರಿತು ಮಾತನಾಡಿದ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ , ಪ್ರಜ್ವಲ್‌ ಅಮಾನತಿಗೆ ನಿನ್ನೆಯೇ ನಿರ್ಧಾರ ಮಾಡಲಾಗಿದೆ.

ತಪ್ಪು ಯಾರೇ ಮಾಡಿದ್ರೂ ತಪ್ಪು. ಎಸ್ ಐ ಟಿ ತನಿಖೆಯ ವರದಿ ಬಂದ ಬಳಿಕ ಎಲ್ಲವನ್ನೂ ಮಾತಾಡ್ತೀನಿ ಎಂದು ತಿಳಿಸಿದರು ಪೆನ್‍ಡ್ರೈವ್ ಸುಳಿಯಲ್ಲಿರುವ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಹಾಸನ, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆಯುತ್ತಿದೆ. ದೇವೇಗೌಡರ ಮೊಮ್ಮಗ ಅಂತ ಬಿಡಬಾರದು ಈ ಕೂಡಲೇ ಪ್ರಜ್ವಲ್ ಬಂಧಿಸುವಂತೆ ಘೋಷಣೆ ಕೂಗಿ ಆಕ್ರೋಶವನ್ನು ಜನರು ಹೊರಹಾಕುತ್ತಿದ್ದಾರೆ.ಎಸ್‍ಐಟಿ ಮುಖ್ಯಸ್ಥ ಬಿ.ಕೆ ಸಿಂಗ್ ನೇತೃತ್ವದ ಟೀಂ ತನಿಖೆ ಶುರುಮಾಡಲಿದ್ದು, ಹೊಳೆ ನರಸಿಪುರದಲ್ಲಿ ದಾಖಲಾಗಿರುವ ಎಫ್ ಐಆರ್ ಆಧಾರದ ಮೇಲೆ ತನಿಖೆ ನಡೆಸಲಿದೆ. ಎಸ್ ಐ ಟಿ ತನಿಖೆ ನಡೆಯುತ್ತಿರುವಾಗಲೇ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದಾರೆ ಎಂದು ತಿಳಿದು ಬಂದಿದೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page