
ಪುಲ್ಕೆರಿ ಫ್ರೆಂಡ್ಸ್ ಕ್ಲಬ್ ಇದರ 49 ನೇ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಆರೋಗ್ಯ, ಕಣ್ಣಿನ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರ ನಡೆಯಿತು.
ಪುಲ್ಕೆರಿ ಫ್ರೆಂಡ್ಸ್ ಕ್ಲಬ್ ನಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮ ದಲ್ಲಿ ಅಧ್ಯಕ್ಷರಾಗಿ ರೋಟರಿ ಕ್ಲಬ್ ನ ನವೀನ್ ಶೆಟ್ಟಿ, ಕಾರ್ಯಕ್ರಮ ದ ಉದ್ಘಾಟನೆಯನ್ನು ಭುವನೇಂದ್ರ ಕಾಲೇಜು ನ ಉಪನ್ಯಾಸಕರಾದ ನಂದಾಕಿಶೋರ್ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು, ಮುಖ್ಯ ಅತಿಥಿ ಗಳಾಗಿ ಖ್ಯಾತ ಚಾರ್ಟೆಡ್ ಅಕೌಂಟ್ ಹರೀಶ್ ರಾವ್, ತಾಲ್ಲೂಕಿನ ವೈದ್ಯಾಧಿಕಾರಿ ಡಾ. ಸಂದೀಪ್ ಕುಡ್ವ, ಅಜ್ಜರಕಾಡು ಆಸ್ಪತ್ರೆ ಯ ರಕ್ತ ನಿಧಿ ಯ ವೈದ್ಯಧಿಕಾರಿ ಡಾ. ವೀಣಾ, ಕಾಮತ್ ಕಣ್ಣಿನ ಆಸ್ಪತ್ರೆ ಯ ಲೋಕೇಶ್ ಹಾಗೂ ಇಕ್ಬಲ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಮಾರು 30 ಕ್ಕೂ ಮಿಕ್ಕಿ ಯೂನಿಟ್ ರಕ್ತದಾನ, ಹಾಗೂ 150 ಕ್ಕೂ ಮಿಕ್ಕಿ ಜನ ಉಚಿತ ಅರೋಗ್ಯ ಶಿಬಿರದ ಸದುಪಯೋಗವನ್ನು ಪಡೆದು ಕೊಂಡರು.
ಕ್ಲಬ್ ನ ಅಧ್ಯಕ್ಷರಾದ ಸುನಿಲ್ ಕೆ ಆರ್ ಇವರು ಸ್ವಾಗತಿಸಿದರು, ಪ್ರದಾನ ಕಾರ್ಯದರ್ಶಿ ಅತೀಕ್ ವಂದಿಸಿ, ಕ್ಲಬ್ ನ ಸಂಚಾಲಕರಾದ ಸುನಿಲ್ ಕೋಟ್ಯಾನ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಕ್ಲಬ್ ನ ಸದಸ್ಯರಾದ ಅಬ್ದುಲ್ಲ, ಮಂಜುನಾಥ ಪಾಟೀಲ್, ಅಮೀರ್, ಧರ್ಮೆಂದ್ರ, ಅನಿಲ್ ಮತಿತರರು ಉಪಸ್ಥಿತರಿದ್ದರು.

























