
ನವದೆಹಲಿ: ಮದ್ಯ ನೀತಿ ಹಗರಣದಲ್ಲಿ , ಜೈಲು ಪಾಲಾಗಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾಮೀನಿನ ಮೇಲೆ ಹೊರಬಂದಿದ್ದರು.
ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಜಾಮೀನಿನ ಮೇರೆಗೆ ಹೊರ ಬಂದಿದ್ದ ದೆಹಲಿ ಸಿಎಂ ಇದೀಗ ಜಾಮೀನು ಅವಧಿ ಅಂತ್ಯಗೊಂಡಿದ್ದು,ಇಂದು ಮತ್ತೆ ತಿಹಾರ್ ಜೈಲಿಗೆ ಮರಳಲ್ಲಿದ್ದಾರೆ. ಇನ್ನು ಜಾಮೀನು ವಿಸ್ತರಣೆ ವಿಚಾರವಾಗಿ ಅರ್ಜಿ ಸಲ್ಲಿಸಿದ್ದು ,ಅದರ ವಿಚಾರಣೆ ಜೂನ್ 5 ರಂದು ನಡೆಯಲಿದೆ ಎನ್ನಲಾಗಿದೆ.
ಇನ್ನು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶರಣಾಗುವ ಮುನ್ನ, “ನಾನು ಒಳಗಿರಲಿ ಅಥವಾ ಹೊರಗಿರಲಿ ದೆಹಲಿಯ ಕೆಲಸ ನಿಲ್ಲುವುದಿಲ್ಲ. ಇವರು ನನ್ನನ್ನು ಎಷ್ಟು ದಿನ ಜೈಲಿನಲ್ಲಿ ಇಡುತ್ತಾರೋ ಗೊತ್ತಿಲ್ಲ ಆದರೆ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಲು ನಾನು ಜೈಲಿಗೆ ಹೋಗುತ್ತಿದ್ದೇನೆ ಎಂಬ ಮಾತನ್ನು ನೆನಪಿಟ್ಟುಕೊಳ್ಳಿ” ಎಂದು ವಿಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.