
ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಅರ್ಬಿ ದುರ್ಗ ಇಲ್ಲಿ ಧರ್ಮ ದೈವಗಳ ಪುನರ್ ಪ್ರತಿಷ್ಠೆ , ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಮಿತಿಯ ಮಹಾ ಸಭೆಯು ಸಮಿತಿಯ ಗೌರವಾಧ್ಯಕ್ಷರಾದ ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರು ಆಗಿರುವ ವಿ ಸುನಿಲ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ
ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ.) ನ ಸಂಸ್ಥಾಪಕ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಇವರ ಸಹಕಾರದೊಂದಿಗೆ ಗಣ್ಯ ಮಹನೀಯರ ಮಹಾ ಸಭೆಯು ಯಶಸ್ವಿಯಾಗಿ ನಡೆಯಿತು.
ಮುಂಬೈಯ ಖ್ಯಾತ ಉದ್ಯಮಿ ಗಿರೀಶ್ ಶೆಟ್ಟಿ ಕುಡುಪುಲಾಜೆ ದೀಪ ಪ್ರಜ್ವಲನ ಮಾಡಿ ದೈವಸ್ಥಾನದ ಸಂಪೂರ್ಣ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿ ಶುಭ ಹಾರೈಸಿದರು.
ಕಾರ್ಕಳದ ಖ್ಯಾತ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಯಕ್ಷ ಕಲಾರಂಗ (ರಿ.) ಕಾರ್ಕಳದ ಅಧ್ಯಕ್ಷರಾದ ವಿಜಯ ಶೆಟ್ಟಿ ಅವರು ಧರ್ಮ ದೈವಗಳ ಪುನರ್ ಪ್ರತಿಷ್ಠೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಮಿತಿಯ ವಿಜ್ಞಾಪನಾ ಪಾತ್ರವನ್ನು ಅನಾವರಣಗೊಳಿಸಿ ಸಂಪೂರ್ಣ ನೆರವು ನೀಡುವುದಾಗಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ದೈವಸ್ಥಾನದ ಯೋಜನೆಗಳ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ ಅವರು ಮಾತನಾಡಿ ಮುಂದಿನ ದಿನಗಳಲ್ಲಿಯೂ ದೈವಸ್ಥಾನದ ಅಭಿವೃದ್ಧಿಗೆ ಜೋತೆಯಾಗಿ ಇರುವುದಾಗಿ ತಿಳಿಸಿದರು.
ದೈವಸ್ಥಾನದ ಕಾರ್ಯನಿರ್ವಾಹಕ ಮೊಕ್ತೇಸರಾದ ಅರ್ಬಿ ಸುಬ್ರಾಯ ಪಾಠಕ್ , ಅರ್ಚಕರಾದ ವಿರೂಪಾಕ್ಷ ಮರಾಠೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬರ್ಕೆ ಮನೆ ಮಿಯ್ಯಾರಿನ ಜಗದೀಶ್ ಪೂಜಾರಿ, ದುರ್ಗಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಹೇಶ್ ರಾವ್, ಸಿದ್ಧಿವಿನಾಯಕ ದೇವಸ್ಥಾನ ಗಣಪತಿ ಕಟ್ಟೆ ಮಲ್ಲಾರು ಇಲ್ಲಿಯ ಅಧ್ಯಕ್ಷ ಶಂಕರ್ ನಾಯ್ಕ್, ಕೆಎಂಎಫ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಶಂಕರ್ ಭಟ್ ಕೆರ್ವಾಶೆ,
ವೈದ್ಯರಾದ ಡಾ. ಪ್ರಶಾಂತ್ ಕುಮಾರ್, ಸುಕೀರ್ತಿ ಶೆಟ್ಟಿ ಮಿಯ್ಯಾರು, ರೋಹಿತ್ ಶೆಟ್ಟಿ ಮಿಯ್ಯಾರು,
ಕಿಶೋರ್ ಶೆಟ್ಟಿ ಮಿಯ್ಯಾರು, ಪ್ರಶಾಂತ್ ಆಚಾರ್ಯ,
ಅಶೋಕ್ ಮಡಿವಾಳ, ರಮೇಶ್ ಶೆಟ್ಟಿ ರೆಂಜಾಳ, ರಾಮಚಂದ್ರ ನಾಯ್ಕ್ ಅರ್ಬಿ, ಕರುಣಾಕರ ಶೆಟ್ಟಿ, ಕೃಷ್ಣ ಪೂಜಾರಿ ತೆಳ್ಳಾರು , ವಿಠ್ಠಲ್ ಶೆಟ್ಟಿ ಮಲೆವೆಟ್ಟು, ಭಾಸ್ಕರ್ ಕುಲಾಲ್ ಕಾರ್ಕಳ, ಬಜಗೋಳಿಯ ದೇವದಾಸ್ ಪ್ರಭು ಮತ್ತು ಸುರೇಶ್ ಶೆಟ್ಟಿ,
ಸದಾಶಿವ ಪೂಜಾರಿ ಕೆರೆಮನೆ ನಾರ್ಕಟ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರಮೇಶ್ ಕಾಡಂಬಳ, ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ರಮೇಶ್ ಅಂಬಡೆಮಾರು,, ಮಹಿಳಾ ಸಮಿತಿಯ ಅಧ್ಯಕ್ಷ ವಸಂತಿ ಜಯ, ದೈವಸ್ಥಾನದ ಗುರಿಕಾರರುಗಳಾದ ಸಂಜೀವ ಕಾಡಂಬಳ, ಸಾಧು ಅಂಬಡೆಮಾರು, ದಿನೇಶ್ ಕಾಡಂಬಳ, ಮಾಡಿದ ಕುರ್ಕಲಪಲ್ಕೆ ಹಾಗೂ ಮೊಗೇರ ಸಮುದಾಯದ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಹಾಗೂ ನೇಮೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ವಿ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ದೈವಸ್ಥಾನದ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ಸಂಜೀವ ಎಸ್ ಕೆ ಸ್ವಾಗತಿಸಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸಮುದಾಯದ ಯುವ ಉದ್ಯಮಿ ಉಮೇಶ್ ಜೆ ಮಿಯ್ಯಾರು ವಂದಿಸಿದರು. ಅಧ್ಯಾಪಕ ದೇವದಾಸ್ ಕೆರೆಮನೆ , ನಿಸರ್ಗನಗರ ಮಿಯ್ಯಾರು ನಿರೂಪಿಸಿದರು.

























