
ತಿರುಪತಿ: ತಿರುಪತಿಗೆ ಬರುವ ಭಕ್ತರಲ್ಲಿ ಅಲ್ಲಿನ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ತಿರುಪತಿ-ತಿರುಮಲ ದೇವಸ್ಥಾನದ ನೂತನ ಇಒ ಆಗಿ ಅಧಿಕಾರ ವಹಿಸಿಕೊಂಡ ಶ್ಯಾಮಲಾ ರಾವ್ ಪರಿಶೀಲನೆ ನಡೆಸಿ ಎಂಆರ್‌ಪಿ ಬೆಲೆಗಿಂತ ಹೆಚ್ಚು ಹಣ ಪಡೆದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ದೇವಸ್ಥಾನದ ಶ್ರೀನಿವಾಸಮಂಗಾಪುರ ಹಾಗೂ ಮೆಟ್ಟಿಲು ಮಾರ್ಗದಲ್ಲಿ ಅಂಗಡಿಗಳ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಅಲ್ಲಿಗೆ ಬರುವ ಭಕ್ತರು ಆರೋಪಿಸಿದ್ದು ಹೀಗಾಗಿ ಟಿಟಿಡಿ ಎಸ್ಟೇಟ್ ಅಧಿಕಾರಿ ಗುಣಭೂಷಣ ರೆಡ್ಡಿ ಅವರು ಜೆಇಒ ಗೌತಮಿ ಅವರ ಮೇಲ್ವಿಚಾರಣೆಯಲ್ಲಿ ಅಂಗಡಿಗಳನ್ನು ಪರಿಶೀಲನೆ ನಡೆಸಿ ಈ ಎಚ್ಚರಿಕೆ ನೀಡಿದ್ದಾರೆ. ನಿಯಮ ಉಲ್ಲಂಘಿಸಿದ ಮಳಿಗೆ ಸಂಖ್ಯೆ 3ರ ಮಾಲೀಕರಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು 25,000 ದಂಡ ವಿಧಿಸಲಾಗುವುದು ಎಂದು ಪ್ರಕಟಣೆಯಲ್ಲಿ ಸೂಚಿಸಿದೆ.