ಪರ್ಪಲೆಗುಡ್ಡೆ ರಸ್ತೆ – ಕಾಬೆಟ್ಟು ಕ್ರಾಸ್ ಮಾರ್ಗದ ಸ್ವಚ್ಛತೆ

ಸ್ವಚ್ಛ ಕಾರ್ಕಳ ಬ್ರಿಗೇಡ್ ವತಿಯಿಂದ ಮಳೆಗಾಲದ ಮುನ್ನ ಸ್ವಚ್ಛತಾ ಅಭಿಯಾನ
ಭಾನುವಾರ ಬೆಳಿಗ್ಗೆ 6.30 ರಿಂದ 8.30ರವರೆಗೆ ಪರ್ಪಲೆ ಗುಡ್ಡೆ ರಸ್ತೆ – ಕಾಬೆಟ್ಟು ಕ್ರಾಸ್ ಮಾರ್ಗದಲ್ಲಿ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು.

ಈ ಅಭಿಯಾನದಲ್ಲಿ ಆರ್ಎಸ್ಎಸ್ನ ಪರಿಸರ ಗತಿವಿಧಿ ಪ್ರಮುಖರು ನಮ್ಮೊಂದಿಗೆ ಕೈಜೋಡಿಸಿದರು. ರಸ್ತೆಯ ಬದಿಯಲ್ಲಿ ಮತ್ತು ವಿವಿಧ ಸ್ಥಳಗಳಲ್ಲಿ ಎಸೆಯಲ್ಪಟ್ಟಿದ್ದ
- ಗುಟ್ಕಾ ಪ್ಯಾಕೆಟ್ಗಳು
- ಪ್ಲಾಸ್ಟಿಕ್ ಕಸ
- ಪ್ಲಾಸ್ಟಿಕ್ ಬಾಟಲಿಗಳು
- ಬಿಯರ್ ಬಾಟಲಿಗಳು
ಇತ್ಯಾದಿ ಅನೇಕ ಕಸಗಳನ್ನು ಸಂಗ್ರಹಿಸಲಾಯಿತು. ಒಟ್ಟು ಸುಮಾರು 20 ಗೋಣಿಚೀಲಗಳಷ್ಟು ಕಸ ತೆರವುಗೊಳಿಸಲಾಯಿತು.
ಸ್ವಚ್ಛತಾ ಅಭಿಯಾನದ ನಂತರ ಆರ್ಎಸ್ಎಸ್ ಗತಿವಿಧಿಯ ಪ್ರಮುಖರು ನಾವು ನೆಟ್ಟು ಬೆಳೆಸಿದ ಸ್ವಾತಂತ್ರ್ಯ ವನಕ್ಕೆ ಭೇಟಿ ನೀಡಿ, ಗಿಡಗಳ ಬೆಳವಣಿಗೆಯನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.


ಈ ಸ್ವಚ್ಛತಾ ಕಾರ್ಯದಲ್ಲಿ ಸ್ವಚ್ಛ ಕಾರ್ಕಳ ಬ್ರಿಗೇಡ್ನ ಅನೇಕ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು.




























