
ಇತ್ತೀಚಿಗೆ ಹಲವಾರು ವಿಚ್ಛೇದನ ಪ್ರಕರಣಗಳು ನಡೆಯುತ್ತಿದ್ದು ಇದೀಗ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ನಟ ಗುರು ಯುವರಾಜ್ ಕುಮಾರ್ ರಾಘವೇಂದ್ರ ಅವರು ತಮ್ಮ ಪತ್ನಿಯಿಂದ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಘವೇಂದ್ರ ರಾಜ್ ಕುಮಾರ್ ಅವರ ದ್ವಿತೀಯ ಪುತ್ರ ನಟ ಯುವರಾಜ್ ಕುಮಾರ್ ಅವರು ತಮ್ಮ ಪತ್ನಿ ಶ್ರೀದೇವಿಯಿಂದ ವಿಚ್ಚೇದನ ಕೋರಿ ಜೂನ್.6 ರಂದು ಫ್ಯಾಮಿಲಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು ಎಂಸಿ ಆ್ಯಕ್ಟ್ ಸೆಕ್ಷನ್ 13(1)(ia) ಅಡಿಯಲ್ಲಿ ದೂರು ದಾಖಲಾಗಿದೆ. ಅರ್ಜಿಗೆ ಸಂಬಂಧಿಸಿ ಫ್ಯಾಮಿಲಿ ಕೋರ್ಟ್ ಈಗಾಗಲೇ ಯುವರಾಜ್ ಪತ್ನಿ ಶ್ರೀದೇವಿಗೆ ನೋಟೀಸ್ ನೀಡಿದ್ದು ಈ ಅರ್ಜಿಯ ವಿಚಾರಣೆಯನ್ನು ನ್ಯಾಯಾಲವು ಜುಲೈ 4 ರಂದು ನಿಗದಿಪಡಿಸಿದೆ.
ವಿಚ್ಚೇದನ ಅರ್ಜಿಯಲ್ಲಿ ನಟ ಯುವರಾಜ್ ತಮ್ಮ ಪತ್ನಿ ವಿರುದ್ದ ಹಲವು ಕಾರಣಗಳನ್ನು ನೀಡಿದ್ದು ಈ ಪೈಕಿ ಕ್ರೌರ್ಯ, ಅಗೌರವದಿಂದ ನಡೆದುಕೊಂಡ ಆರೋಪ, ಮಾನಸಿಕವಾಗಿ ಟಾರ್ಚರ್ ಸೇರಿದಂತೆ ಹಲವು ಕಾರಣಗಳನ್ನು ಉಲ್ಲೇಖಿಸಿದ್ದಾರೆ.
ಯುವರಾಜ್ ಪತ್ನಿ ಶ್ರೀದೇವಿ ಭೈರಪ್ಪ ಈಗಾಗಲೇ ಪತಿಯಿಂದ ದೂರವಾಗಿ ಹಲವು ತಿಂಗಳುಗಳಿಂದ ಅಂತರ ಕಾಯ್ದುಕೊಂಡು ಅಮೇರಿಕಾದಲ್ಲಿ ನೆಲೆಸಿದ್ದಾರೆ. ಹೀಗಾಗಿ ಇತ್ತಿಚೆಗೆ ‘ಯುವ’ ಸಿನಿಮಾ ಶೂಟಿಂಗ್, ಸಕ್ಸಸ್ ಮೀಟ್‌ನಿಂದಲೂ ದೂರ ಉಳಿದಿದ್ದಾರೆ.
4 ವರ್ಷಗಳ ಹಿಂದೆ ಮೈಸೂರು ಮೂಲದ ಶ್ರೀದೇವಿ ಜೊತೆ ಯುವರಾಜ್ ಲವ್ ಕಂ ಅರೇಂಜ್ ಮ್ಯಾರೇಜ್ ಆಗಿದ್ದರು. ಬಳಿಕ ಡಾ.ರಾಜ್‌ಕುಮಾರ್ ಹೆಸರಿನಲ್ಲಿರುವ IAS ಅಕಾಡೆಮಿ ಕೋಚಿಂಗ್ ಸೆಂಟರ್ ನಡೆಸಿಕೊಂಡು ಹೋಗುತ್ತಿದ್ದರು.