
ಆಗಸ್ಟ್ 21 : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ
ವತಿಯಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ
ಆವರಣದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ
ದಿ.ಗೋಪ ಶೆಟ್ಟಿಯವರ 104ನೇ ಜನ್ಮದಿನದ ಅಂಗವಾಗಿ
ಆಗಸ್ಟ್ 21ರಂದು ಹಳೇವಿದ್ಯಾರ್ಥಿ ಸಂಘ ಜ್ಞಾನಸುಧಾ
ಕಾರ್ಕಳ ಹಾಗೂ ಕೆ.ಎಂ.ಸಿ. ಬ್ಲಡ್‌ಸೆಂಟರ್‌ನ ನೆರವಿನೊಂದಿಗೆ
ರಕ್ತದಾನ ಶಿಬಿರ ಜರುಗಿತು.
ರಕ್ತದಾನ ಶಿಬಿರವನ್ನು ಕಸ್ತೂರ್ಬಾ ಹಾಸ್ಪಿಟಲ್ ರಕ್ತನಿಧಿ
ಹಾಗೂ ಎಚ್.ಬಿ.ಟಿ ವಿಭಾಗದ ಮುಖ್ಯಸ್ಥ ಪ್ರೊಫೆಸರ್
ಡಾ.ಗಣೇಶ್ ಮೋಹನ್ ಉದ್ಘಾಟಿಸಿ ರಕ್ತದಾನ ಮಹಾದಾನವಾಗಿದೆ.
ಜ್ಞಾನಸುಧಾ ಸಂಸ್ಥೆಯು ಸಂಸ್ಥಾಪಕರ
ದಿನಾಚರಣೆಯನ್ನು ಸಾಮಾಜಿಕ ಕಾರ್ಯಕ್ರಮದ
ಮೂಲಕ ಕೈಗೊಳ್ಳುತ್ತಿರುವ ಸೇವೆ ಶ್ಲಾಘನೀಯ
ಎಂದರು. ರಕ್ತದಾನ ಶಿಬಿರದಿಂದ 83 ಯುನಿಟ್ ರಕ್ತ
ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ
ಪದವಿಪೂರ್ವ ಕಾಲೇಜಿನ ಮುಖ್ಯ ಕಾರ್ಯನಿರ್ವಣಾಧಿಕಾರಿ ಶ್ರೀ
ದಿನೇಶ್ ಎಂ ಕೊಡವೂರ್, ಉಪಪ್ರಾಂಶುಪಾಲರಾದ ಶ್ರೀ ಸಾಹಿತ್ಯ,
ಶ್ರೀಮತಿ ಉಷಾ ರಾವ್ ಯು, ಡೀನ್ ಅಕಾಡೆಮಿಕ್ಸ್ ಡಾ. ಮಿಥುನ್
ಯು ಮತ್ತು ಹಿತೈಶಿ ದೇವೇಂದ್ರ ನಾಯ್ಕ್
ಉಪಸ್ಥಿತರಿದ್ದರು.
ಸಂಸ್ಥೆಯ ಪಿ.ಆರ್.ಒ ಶ್ರೀಮತಿ ಜ್ಯೋತಿಪದ್ಮನಾಭ ಭಂಡಿ
ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕ ವಿನಯಚಂದ್ರ
ನಿರೂಪಿಸಿ ವಂದಿಸಿದರು.



















