
ಕಾರ್ಕಳ : ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ 2024-2025ನೇ ಸಾಲಿನ ನೂತನ ಶಾಲಾ ಸಂಸತ್ತಿಗೆ ಚುನಾವಣೆ ನಡೆಯಿತು. ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ದೈವಿಕ್ ಶೆಟ್ಟಿ ಹಾಗೂ ಉಪನಾಯಕಿಯಾಗಿ ಆಶ್ನಿ ಕೋಟ್ಯಾನ್ ಆಯ್ಕೆಯಾದರು. ವಿಜೇತರಾದ ವಿದ್ಯಾರ್ಥಿಗಳನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್‌ಶೆಟ್ಟಿಯವರು ಅಭಿನಂದಿಸಿದರು. ಈ ಸಂದರ್ಭ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್, ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಪ್ರೌಢಶಾಲೆಯ ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ., ಅಕಾಡೆಮಿಕ್ ಅಡ್ವೈಸರ್ ಶ್ರೀಮತಿ ಶಾರದಾ ಆಂಬರೀಶ್, ಕಾಲೇಜು ವಿಭಾಗದ ಉಪಪ್ರಾಂಶುಪಾಲ ಶ್ರೀ ಸಾಹಿತ್ಯ, ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು, ಕನ್ನಡ ವಿಭಾಗದ ಮುಖ್ಯಸ್ಶರಾದ ಮಂಜುನಾಥ್ ಮುದ್ರಾಡಿ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ರೇಷ್ಮಾ ಸಾಲೀಸ್ ಹಾಗೂ ಕಿರಣ್‌ಕುಮಾರ್ ಉಪಸ್ಥಿತರಿದ್ದರು.
