
ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡರ 513ನೇ ಜಯಂತಿಯನ್ನು ಆಚರಿಸಲಾಯಿತು. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಕೃಷಿ ತಜ್ಞ, ಶಿಕ್ಷಣ ತಜ್ಞ, ಆಡಳಿತ ತಜ್ಞ, ಇಂಜಿನಿಯರ್, ವಾಣಿಜ್ಯೋದ್ಯಮಿ, ಕೈಗಾರಿಕೊದ್ಯಮಿ, ವಿಜ್ಞಾನಿ, ತಂತ್ರಜ್ಞಾನಿಗಳ ದೂರ ದೃಷ್ಟಿಯುಳ್ಳ ರಾಜ. ಹತ್ತಾರು ರೀತಿಯ ಪ್ರತಿಭೆಯ ಮೇರು ಪರ್ವತದಂತ ವ್ಯಕ್ತಿಯಾಗಿದ್ದರು. ಇವರು ಕೆರೆ, ದೇವಾಲಯ, ಕೋಟೆ – ಕೊತ್ತಲಗಳನ್ನು ನಿರ್ಮಿಸುವುದರ ಮೂಲಕ ಅನೇಕ ರೀತಿಯ ಸುಧಾರಣೆಗಳನ್ನು ತಂದು ದೇಶ-ವಿದೇಶಗಳು ಬೆಂಗಳೂರನ್ನು ತಿರುಗಿ ನೋಡುವಂತೆ ಮಾಡಿದ್ದಾರೆ ಎಂದು ಕುಮಾರಿ ವರ್ಷಿಣಿ ತಮ್ಮ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಜೇಸಿ ಚಿತ್ತರಂಜನ್ ಶೆಟ್ಟಿಯವರು, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಸುರೇಖಾ ರಾಜ್ ರವರು, ಶಾಲಾ ವಿದ್ಯಾರ್ಥಿ ನಾಯಕಿ ಕುಮಾರಿ ನಿರೀಕ್ಷಾ ರವರು ಹಾಗೂ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆದ 513ನೇ ಕೆಂಪೇಗೌಡರ ಜಯಂತಿ ಪ್ರಯುಕ್ತ ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಕಾರ್ಕಳ ಇಲ್ಲಿಯ ವಿದ್ಯಾರ್ಥಿಗಳು ದೃಶ್ಯರೂಪಕ ನೀಡಿದರು.
