ಕಾರ್ಕಳ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

ಶ್ರೀ ಮಹಾಲಿಂಗೇಶ್ವರ ಯುವಕ ವೃಂದ(ರಿ) ಬೋಳ ಪಿಲಿಯೂರು, ಇದರ ವತಿಯಿಂದ ನಡೆದ ಉಡುಪಿ ಜಿಲ್ಲಾಮಟ್ಟದ “ಬೋಳ ಪಿಲಿಯೂರು ಮ್ಯಾರಥಾನ್” ಸ್ಪರ್ಧೆಯಲ್ಲಿ ಶ್ರೀ ಭುವನೇಂದ್ರ ರೆಸಿಡೆನ್ಶಿಯಲ್ ಸ್ಕೂಲ್ ಕಾರ್ಕಳ, ಇಲ್ಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಒಟ್ಟು ಎಂಟು ಪ್ರಶಸ್ತಿ ಹಾಗೂ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
7ನೇ ತರಗತಿಯ ಕುಮಾರಿ ಪೂಜಾ ಮೂರನೇ ಸ್ಥಾನ, ಕುಮಾರಿ ಸಂಜೀವಿನಿ ನಾಲ್ಕನೇ ಸ್ಥಾನ ಹಾಗೂ ಮಾಸ್ಟರ್ ರೋಹನ್ ಆರನೇ ಸ್ಥಾನ, 8ನೇ ತರಗತಿಯ ಮಾಸ್ಟರ್ ಶ್ರೀಶೈಲ್ ನಾಲ್ಕನೇ ಸ್ಥಾನ, 9ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ರಾಧಾ ಐದನೇ ಸ್ಥಾನ, ಕುಮಾರಿ ಸಿಂಚನ ಆರನೇ ಸ್ಥಾನ, ಮಾಸ್ಟರ್ ಪ್ರಜ್ವಲ್ ಆರನೇ ಸ್ಥಾನ ಹಾಗೂ 10ನೇ ತರಗತಿಯ ವಿದ್ಯಾರ್ಥಿಯಾದ ಮಾಸ್ಟರ್ ಸಮರ್ಥ್ ನಾಯಕ ನಾಲ್ಕನೇ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಆಡಳಿತ ಮಂಡಳಿ, ಪೂರ್ವ ವಿದ್ಯಾರ್ಥಿ ಸಂಘ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಶುಭ ಹಾರೈಸಿದ್ದಾರೆ.




















































