7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್,3 ವಿದ್ಯಾರ್ಥಿಗಳಿಗೆ 90% ಕ್ಕಿಂತ ಅಧಿಕ ಫಲಿತಾಂಶ

ಕಾರ್ಕಳದ ಗ್ರಾಮೀಣ ಶಾಲೆಯಾದ ಸರಕಾರಿ ಸಂಯುಕ್ತ ಪ್ರೌಢಶಾಲೆ ರೆಂಜಾಳದ ವಿದ್ಯಾರ್ಥಿಗಳು ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಅಮೋಘ ಸಾಧನೆಯನ್ನು ಮೆರೆದಿದ್ದಾರೆ . ಪರೀಕ್ಷೆಗೆ ಹಾಜರಾದ ಎಲ್ಲಾ 21 ವಿದ್ಯಾರ್ಥಿಗಳು ಉತ್ತೀರ್ಣ ಆಗುವುದರೊಂದಿಗೆ ಶಾಲೆಯು ಸತತವಾಗಿ ನಾಲ್ಕು ಬಾರಿ 100 ಶೇಕಡಾ ಫಲಿತಾಂಶವನ್ನು ದಾಖಲಿಸಿದೆ. ಕುಮಾರಿ ರೀತಿಕ್ಷಾ ಇವರು 600 ಅಂಕವನ್ನು (96%) ಪಡೆಯುವುದರೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಮತ್ತು 10 ವಿದ್ಯಾರ್ಥಿಗಳು ಫಸ್ಟ್ ರಾಂಕ್ ನಲ್ಲಿ ಉತ್ತೀರ್ಣರಾಗಿರುತ್ತಾರೆ. ಶಾಲೆಯು ಕರ್ನಾಟಕ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿಯಿಂದ A ಗ್ರೇಡ್ ಮಾನ್ಯತೆಯನ್ನು ಪಡೆದಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಮುಖ್ಯ ಶಿಕ್ಷಕರು ಸಹ ಶಿಕ್ಷಕರು , ಎಸ್ ಡಿ ಎಂ ಸಿ ಯವರು ಮತ್ತು ಶಾಲಾ ಹಳೆ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.













