
ನನ್ನ ಮೇಲೆ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ಸದಾ ಇರುವ ಕಾರಣ ಇಷ್ಟೊಂದು ಬಾರಿ ಪುಷ್ಪಾರ್ಚನೆಯ ಅವಕಾಶ ದೊರೆತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜಕೀಯದಲ್ಲಿ ಹೊಗಳುವವರು ತೆಗಳುವವರು ಇರುತ್ತಾರೆ. ಸ್ಪರ್ಧೆ ಯಾವಾಗಲೂ ಆರೋಗ್ಯಕರವಾಗಿರಬೇಕು. ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ರಾಜ್ಯದಲ್ಲಿ ರೈತರು, ಸಾರ್ವಜನಿಕರು ಸುಖ ಸಮೃದ್ಧಿಯಿಂದ ಇರಲಿ ಎಂದು ದೇವಿಯಲ್ಲಿ ಪ್ರಾರ್ಥಿಸಿದ್ದೇನೆ. ಇನ್ನು ಸರಕಾರದಿಂದ ಪತ್ರಿಕೆಗಳಲ್ಲಿ ನೀಡಿರುವ ದಸರಾ ಜಾಹೀರಾತಿನ ಬಗ್ಗೆ ಪರ ವಿರೋಧಗಳು ವ್ಯಕ್ತವಾಗಿದ್ದು ಈ ಬಗ್ಗೆ ಪ್ರತಿಕ್ರಿಸಿದ ಸಿಎಂ ನೀವು ಹೇಗೆ ವ್ಯಾಖ್ಯಾನ ಮಾಡುತ್ತಿರೋ ಹಾಗೆ ಎಂದು ತಿಳಿಸಿದ್ದಾರೆ.













