
ಗೋವು ಮನುಕುಲದ ಆರಂಭದಿಂದಲೂ, ಮನುಷ್ಯರ ಪ್ರೀತಿಪಾತ್ರವಾದ ಪ್ರಾಣಿಯಾಗಿತ್ತು. ಆರ್ಯರು, ಭಾರತೀಯರ ನಾಗರಿಕ ಪರಂಪರೆಯಲ್ಲಿ ಗೋವಿನ ಬಳಕೆಯ ಮಹತ್ವ ಗೋಚರವಾಗುತ್ತದೆ. ದಿನನಿತ್ಯದ ಚಟುವಟಿಕೆಗಳಲ್ಲಿ ಸಮಭಾಗಿಯಾಗಿದ್ದ ಗೋವನ್ನು ತಾಯಿಯಾಗಿ, ದೇವರಾಗಿ ಪೂಜಿಸುವ ಸಂಸ್ಕೃತಿ ಬೆಳೆಯುತ್ತಾ ಬಂತು.
ಮನುಷ್ಯರಿಗೆ ಅಮೃತಸದೃಶವಾದ ಹಾಲನ್ನು ನೀಡುವ ಮಾತೃಸಮಾನವಾದ ಗೋವುಗಳ ಸೇವೆ ಮಾಡಲು ಇಂದಿನ ಜನಾಂಗದ ಎಲ್ಲಾ ಯುವಕ – ಯುವತಿಯರು ಕೈ ಜೋಡಿಸಬೇಕು.

ರಾಜ್ಯ ಅತ್ಯುತ್ತಮ ಯುವಮಂಡಲ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಸಾಣೂರು ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಇವರ ಸಹಯೋಗದಿಂದ ಗೋವಿಗಾಗಿ ಮೇವು ಕಾರ್ಯಕ್ರಮ . ಈ ಗೋವಿಗಾಗಿಮೇವು,ಗೋಸೇವೆ,ಗೋಗ್ರಾಸ,ಗೋರಕ್ಷಾಅಭಿಯಾನದಲ್ಲಿ ತೋಟಗಾರಿಕೆ ಇಲಾಖೆ ಕಾರ್ಕಳ ಇಲ್ಲಿ ನಡೆಯಿತು. ಈ ಸೇವಾ
ಕಾರ್ಯಕ್ರಮದಲ್ಲಿ ಮಂಡಲದ ಅಧ್ಯಕ್ಷರು ಪ್ರಸಾದ್ ಶೆಟ್ಟಿ, ಮಾಜಿ ಅಧ್ಯಕ್ಷರು ಗಳಾದ ಮಹೇಶ್ ಕುಮಾರ್, ಜಗದೀಶ್ ಕುಮಾರ್, ಕಾರ್ಯದರ್ಶಿ ಪ್ರಕಾಶ್ ರಾವ್, ಜೊತೆ ಕಾರ್ಯದರ್ಶಿ ಪ್ರಮಿತ್ ಸುವರ್ಣ, ರಾಜೇಶ್ ಪೂಜಾರಿ, ರಮೇಶ್ ಪೂಜಾರಿ, ಪ್ರಭಾಕರ್ ಶೆಟ್ಟಿ, ವಿದ್ಯಾನಂದ, ಜಯನ್ ಶೆಟ್ಟಿ ರೋಹಿತ್ ಆರ್. ಕೆ, ಪ್ರಶಾಂತ್ ಆಚಾರ್ಯ ಭಾಗವಹಿಸಿದ್ದರು.













