
ಜುಲೈ 26ರಂದು ಮಾನನಷ್ಟ ಮೊಕದ್ದಮೆ ಪ್ರಕರಣವೊಂದರಲ್ಲಿ ಸುಲ್ತಾನ್ಪುರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಂಸದ ರಾಹುಲ್ ಗಾಂಧಿ ಬಳಿಕ ಚಮ್ಮಾರನ ಅಂಗಡಿಯಲ್ಲಿ ಕೆಲವು ಚಪ್ಪಲಿಗಳಿಗೆ ಹೊಲಿಗೆ ಹಾಕಿದ್ದು ಇದೀಗ ಆ ಚಪ್ಪಲಿಗಳಿಗೆ ಭಾರಿ ಬೇಡಿಕೆ ಬಂದಿದೆ. ಆ ಚಪ್ಪಲಿಗಳನ್ನು ಲಕ್ಷ ಲಕ್ಷ ಹಣವನ್ನು ಕೊಟ್ಟು ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ.
ರಾಹುಲ್ ಗಾಂಧಿ ಚಪ್ಪಲಿಗಳಿಗೆ ಹೊಲಿಗೆ ಹಾಕಿದ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಇದೀಗ ಅವರು ಹೊಲಿದಿದ್ದ ಚಪ್ಪಲಿಗಳನ್ನು ಖರೀದಿಸಲು ಜನರು ಸರತಿಯಲ್ಲಿ ನಿಂತು ಕೇಳಿದಷ್ಟು ಹಣವನ್ನು ನೀಡಲು ಜನರು ಸಿದ್ಧರಿದ್ದಾರೆ. 10 ಲಕ್ಷ ಬೇಕಾದರೂ ಕೊಡ್ತೀವಿ ಚಪ್ಪಲಿ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಚಮ್ಮಾರ ಹೇಳಿದ್ದಾರೆ.
ಮೊದಲು ಒಬ್ಬ ವ್ಯಕ್ತಿ 1 ಲಕ್ಷದ ಆಫರ್ನೊಂದಿಗೆ ಬಂದಿದ್ದು ಆದರೆ ರಾಹುಲ್ ಗಾಂಧಿ ಹೊಲಿದ ಚಪ್ಪಲಿ ಅವರಿಗೆ ವಿಶೇಷವಾಗಿದೆ. ಯಾರಾದರೂ ಕೋಟಿ ರೂಪಾಯಿ ಕೊಟ್ಟರೂ ಈ ಚಪ್ಪಲಿ ಮಾರುವುದಿಲ್ಲ.ಆ ಚಪ್ಪಲಿಯನ್ನು ಅಂಗಡಿಯಲ್ಲೇ ಇಡುವುದಾಗಿ ಹೇಳಿದ್ದಾರೆ.
ಚಮ್ಮಾರ ರಾಮ್ಚೇತ್ಗೆ ರಾಹುಲ್ ಗಾಂಧಿ ಉಡುಗೊರೆಯನ್ನೂ ಕಳುಹಿಸಿದ್ದಾರೆ. ಚೆತ್ರಾಂಗೆ ಸಹಾಯ ಮಾಡಲು ಶೂ ಮತ್ತು ಚಪ್ಪಲಿ ಹೊಲಿಯಲು ಎಲೆಕ್ಟ್ರಾನಿಕ್ ಯಂತ್ರವನ್ನು ಕಳುಹಿಸಿದ್ದರು. ಇದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ.













