28.4 C
Udupi
Sunday, April 26, 2026
spot_img
spot_img
HomeBlogಗೋಧಿ ಸೇರಿದಂತೆ ಪ್ರಮುಖ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ

ಗೋಧಿ ಸೇರಿದಂತೆ ಪ್ರಮುಖ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ

ನವದೆಹಲಿ: ಕೇಂದ್ರ ಸರ್ಕಾರ, ರೈತರಿಗೆ ಸಿಹಿ ಸುದ್ದಿ ನೀಡಿದ್ದು ಅದೇನೆಂದರೆ ಗೋಧಿ ಸೇರಿದಂತೆ ಪ್ರಮುಖ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಲು ನಿರ್ಧರಿಸಿದೆ.

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು ಮುಂದಿನ ಹಂಗಾಮಿಗೆ ಮಾಡಲಾದ ಈ ಏರಿಕೆ ನಂತರ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು 150 ರೂ. ಹೆಚ್ಚಿಸಿದೆ. ಈ ಮೂಲಕ ಗೋಧಿ ಕ್ವಿಂಟಾಲ್‌ಗೆ 2275 ರೂ.ನಿಂದ 2425 ರೂ.ಗೆ ಏರಿಕೆಯಾಗಿದೆ. ಇದರ ಜೊತೆಗೆ ಸಾಸಿವೆಗೆ 300ರು.ನಷ್ಟು ಕನಿಷ್ಟ ಬೆಂಬಲ ಬೆಲೆ ಹೆಚ್ಚಿಸಲಾಗಿದ್ದು, ಕ್ವಿಂಟಾಲ್‌ಗೆ 5950ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಕುಸುಬೆ ದರವನ್ನು ಕ್ವಿಂಟಾಲ್‌ಗೆ 140 ರು. ಮಸೂರ್ ದಾಲ್ ಕ್ವಿಂಟಾಲ್‌ಗೆ 275, ಬಾರ್ಲಿ ದರ ಕ್ವಿಂಟಾಲ್‌ಗೆ 130 ರು., ಕಡಲೆ ದರ ಕ್ವಿಂಟಾಲ್‌ಗೆ 210 ರು.ನಷ್ಟು ಕನಿಷ್ಠ ಬೆಂಬಲ ಬೆಲೆ ಏರಿಕೆಯಾಗಿದೆ.

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ಮತ್ತು ವಿವಿಧ ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರೈತರಿಗೆ ಕೇಂದ್ರ ಈ ಸಿಹಿ ಸುದ್ದಿ ನೀಡಿದೆ.

ಧಾನ್ಯ ಏರಿಕೆ ಹೊಸದರ
ಗೋಧಿ ₹150 ₹2425
ಸಾಸಿವೆ ₹300 ₹5950
ಕುಸುಬಿ ₹140 ₹5940
ಮಸೂರ್
ದಾಲ್ ₹275 ₹6700
ಬಾರ್ಲಿ ₹130 ₹1980
ಕಡಲೆ ₹210 ₹5650

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page