
ಕ. ರಾ. ವಿಶೇಷ ಶಿಕ್ಷಕರ ಸಂಘ ಹಾಗೂ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಇದರ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭಾಪತಿ ಯು ಟಿ ಖಾದರ್ ಭೇಟಿಯಾಗಿ ವಿಶೇಷ ಶಾಲೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ,
ಸರಕಾರದ ಕಾರ್ಯದರ್ಶಿಯವರ ಜತೆಯಲ್ಲಿ ಆದಷ್ಟು ಬೇಗನೆ ಸಭೆ ಏರ್ಪಡಿಸಿ ಅವರ ಮೂಲಕ ಮುಖ್ಯಮಂತ್ರಿಯವರ ಗಮನಕ್ಕೆ ತರುವ ಮೂಲಕ ಸ್ಪಂದಿಸುವುದಾಗಿ ತಿಳಿಸಿದರು.
ಕ ರಾ ವಿ ಶಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ ವಸಂತ್ ಕುಮಾರ್ ಶೆಟ್ಟಿ, ರಾಜ್ಯಾಧ್ಯಕ್ಷೆ ಡಾ ಕಾಂತಿ ಹರೀಶ್, ಗೌರವಾಧ್ಯಕ್ಷೆ ಅಗ್ನೇಸ್ ಕುಂದರ್ ವಿಕಲಚೇತನರ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷರು ಶಿವಕುಮಾರ್, ಮೇಘರಾಜ್, ಹಾಗೂ 14 ಜಿಲ್ಲೆಗಳ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.