29.5 C
Udupi
Monday, June 22, 2026
spot_img
spot_img
HomeBlogಕೆಡಿಪಿ ಸಭೆಯ ಬಗ್ಗೆ ಶಾಸಕರ ನಿರ್ಲಕ್ಷ ತಕ್ಷಣ ಸಭೆ ಕರೆಯುವಂತೆ ನಾಮನಿರ್ದೇಶನ ಸದಸ್ಯರ ಆಗ್ರಹ

ಕೆಡಿಪಿ ಸಭೆಯ ಬಗ್ಗೆ ಶಾಸಕರ ನಿರ್ಲಕ್ಷ ತಕ್ಷಣ ಸಭೆ ಕರೆಯುವಂತೆ ನಾಮನಿರ್ದೇಶನ ಸದಸ್ಯರ ಆಗ್ರಹ

ಸರಕಾರಿ ಆಸ್ಪತ್ರೆಯ ವೈದ್ಯರ ನೇಮಕ ಮಹಿಳಾ ಆಯೋಗದ ಅಧ್ಯಕ್ಷರಿಂದ ಆಗುವ ಕೆಲಸ ಶಾಸಕರಿಂದ ಯಾಕೆ ಆಗಿಲ್ಲ

ಎಂ. ಪಿ.ಮೊಯಿದ್ದಿನಬ್ಬಾ ಕೆಡಿಪಿ ನಾಮನಿರ್ದೇಶಕ ಸದಸ್ಯರು

ಕೆಡಿಪಿ ಸಭೆಯ ವಿಚಾರ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ನಿರ್ಲಕ್ಷದ ಕುರಿತು ನಾಮನಿರ್ದೇಶನ ಸದಸ್ಯರು ಕಾರ್ಕಳ ಪತ್ರಿಕಾ ಭವನದಲ್ಲಿ ಜೂನ್ 22 ರಂದು ಪತ್ರಿಕಾಗೋಷ್ಠಿ ನಡೆಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಡಿಪಿ ನಾಮ ನಿರ್ದೇಶಕ ಸದಸ್ಯರಾದ ಎಂ. ಪಿ . ಮೊಯಿದ್ದಿನಬ್ಬಾ, ರಾಜ್ಯ ಸರ್ಕಾರ ಕಾರ್ಕಳ ತಾಲೂಕು ಕೆ ಡಿ ಪಿ ಸದಸ್ಯರುಗಳ ನೇಮಕಾತಿ ಮಾಡಿ ಹಲವು ತಿಂಗಳುಗಳೇ ಕಳೆದಿದ್ದರೂ ಈ ಸಮಿತಿಯ ಅಧ್ಯಕ್ಷರಾದ ಕಾರ್ಕಳ ಶಾಸಕರು ಸಭೆಯನ್ನು ಕರೆದಿರುವುದಿಲ್ಲ ಶಾಸಕರು ತಕ್ಷಣ ಕೆಡಿಪಿ ಸಭೆಯನ್ನು ಕರೆದು‌ ಕ್ಷೇತ್ರದ ಪ್ರಗತಿಯ‌ ಬಗ್ಗೆ ಚರ್ಚೆ ನಡೆಸುವಂತೆ ಆಗ್ರಹಿಸುತ್ತೆವೆ ಎಂದರು.

ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಯೋಜನೆ, ಕಾರ್ಯಕ್ರಮಗಳನ್ನು ಸುಮಾರು 33 ಕ್ಕೂ ಹೆಚ್ಚು ಇಲಾಖೆಗಳ ಮೂಲಕ ಅನುಷ್ಠಾನ ಗೊಳಿಸುತ್ತಿದೆ ಆ ಕಾರ್ಯಕ್ರಮ ಯೋಜನೆಗಳ ಪ್ರಗತಿಯನ್ನು ಸಮಯನುಸಾರ ಪರಿಶೀಲಿಸಿ ಪರಿಣಾಮಕಾರಿಯಾಗಿ ಅನುಷ್ಠಾ ಮಾಡುವಂತಾಗಲು ಪ್ರಗತಿ ಪರಿಶೀಲನಾ ಸಭೆ ತೀರಾ ಅಗತ್ಯವಾಗಿದೆ ಆದರೆ ಕಾರ್ಕಳ ಶಾಸಕರು ಆ ಸಮಿತಿಯ ಅಧ್ಯಕ್ಷರಾಗಿ ಈ ಕೆಲಸವನ್ನು ಮಾಡದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಕೇವಲ ಶಾಸಕರೊಬ್ಬರೇ ಅಧಿಕಾರಿಗಳೊಂದಿಗೆ ಸಭೆ ನಡೆಸುವುದು ಸರ್ಕಾರದಿಂದ ನಾಮ ನಿರ್ದೇಶಿತರಾದ ಸದಸ್ಯರ ಅವಾಗಣನೆ ಹಾಗೂ ಶಿಷ್ಟಾಚಾರದ ಉಲ್ಲಂಘನೆ ಯಾಗಿದ್ದು ಸರ್ಕಾರದ ಯೋಜನೆ ಕಾರ್ಯಕ್ರಮಗಳು ನನ್ನ ಇಚ್ಛೆಗೆ ಅನುಗುಣವಾಗಿ ನಡೆಯಬೇಕು ಎಂಬ ದೋರಣೆ ಸರಿಯಲ್ಲ ಸರ್ಕಾರದಿಂದ ನಾಮನಿರ್ದೇಶನ ಗೊಂದವರಿಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಾಳಜಿ ಇದೆ ಎಂಬುವುದನ್ನು ಶಾಸಕರ ಗಮನಕ್ಕೆ ತರ ಬಯಸುತ್ತೇವೆ ಎಂದರು.

ಕೆಡಿಪಿ ಸಭೆಯ ನಿರ್ಲಕ್ಷದ ಪರಿಣಾಮಕ್ಕೆ ಅತೀ ದೊಡ್ಡ ಉದಾಹರಣೆ ಸರಕಾರಿ ಆಸ್ಪತ್ರೆಯ ಮಹಿಳಾ ‌ವೈದ್ದಾದಿಕಾರಿಗಳ ನೇಮಕಾತಿ, ಆಸ್ಪತ್ರೆಯಲ್ಲಿ ತಜ್ಞ ವೈದ್ಯರಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದರೆ ಎನ್ನುವ ಅನೇಕ ದೂರುಗಳು ಬಂದಿದ್ದವು ಒಂದು ವೇಳೆ ಕೆಡಿಪಿ ಸಭೆ‌ ನಡೆಸಿದ್ದರೆ ಈ ಬಗ್ಗೆ ಚರ್ಚೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಬಹುದಿತ್ತು ಈ ಬಗ್ಗೆ ಶಾಸಕರ ನಿರ್ಲಕ್ಷ ಸ್ಪಷ್ಟವಾಗಿ ಕಾಣುತ್ತದೆ ಯಾಕೆಂದರೆ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷೀಯವರು ಸರಕಾರಿ ಆಸ್ಪತ್ರೆಗೆ ಬೇಟಿ‌ ನೀಡಿದ ಒಂದೇ ದಿನ ವೈದ್ಯರ ನೇಮಕವಾಗುತ್ತದೆ ಆದರೆ ಕಳೆದ 22 ವರ್ಷಗಳಿಂದ ಶಾಸಕರಾಗಿ ಸಚಿವರಾಗಿ ಅಧಿಕಾರ ನಡೆಸುವ ಶಾಸಕರಿಂದ ಇದು ಯಾಕೆ ಸಾದ್ಯವಾಗಲಿಲ್ಲ ಎಂದರು.

ಆದ್ದರಿಂದ ಕ್ಷೇತ್ರದ ಜನರ ಹಿತದೃಷ್ಟಿಯಿಂದ ತಕ್ಷಣ ಕೆಡಿಪಿ ಸಭೆ ಕರೆಯುವಂತೆ ಆಗ್ರಹಿಸುತ್ತೇವೆ ಎಂದು ಕಾರ್ಕಳದ ಪತ್ರಿಕಾ ಭವನದಲ್ಲಿ ಜೂ 22 ರಂದು ನಡೆದ ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಕೆಡಿಪಿ ಸದಸ್ಯರಾದ ರುಕ್ಮಯ ಶೆಟ್ಟಿಗಾರ್ ಕುಕ್ಕುಂದೂರು, ಅಮಿತಾ ಶೆಟ್ಟಿ ಸಾಣೂರು, ಉಪಸ್ಥಿತರಿದ್ದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page