
ಕಾರ್ಕಳ: ತಾಲೂಕಿನ ರಥ ಬೀದಿಯ ಬಳಿ ಇರುವ ಶ್ರೀ ಕೆಂಚಿರಾಯ ದೇವಸ್ಥಾನದಲ್ಲಿ ಮೇ 14 ಹಾಗೂ 15ರಂದು ದ್ವಿತೀಯ ವರ್ಷದ ಪ್ರತಿಷ್ಠಾ ವರ್ಧಂತಿ, ನೂತನ ರಾಜಗೋಪುರ ಹಾಗೂ ಪಾಕಶಾಲೆಯ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಮೇ 14ರಂದು ಗುರುವಾರ ಸಂಜೆ ರಾಜಗೋಪುರ ಪ್ರತಿಗ್ರಹ, ಸಾಮೂಹಿಕ ಪ್ರಾರ್ಥನೆ, ವಾಸ್ತು ವಿದ್ಯಾ ಕಲಾಪ, ಸುದರ್ಶನ ಮಹಾಯಾಗ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಗಳು ನಡೆಯಲಿದೆ.
ಮೇ 15ರಂದು ಶುಕ್ರವಾರ ಬೆಳಿಗ್ಗೆ ಪಂಚವಿಂಶತಿ ಕಲಶ ಆರಾಧನೆ, ಸಾನಿಧ್ಯಪ್ರಧ ಪ್ರದಾನಯಾಗ, ಗಣಯಾಗ, ಕಲಶಾಭಿಷೇಕ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 5 ಗಂಟೆಯಿಂದ ಭಜನಾ ಕಾರ್ಯಕ್ರಮ, ಸಂಕ್ರಾಂತಿ ಪೂಜೆ, ಮಹಾಪೂಜೆ ಹಾಗೂ ಪ್ರಸಾದ ವಿತರಣೆ ಜರುಗಲಿದೆ.
ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಪ್ರಕಟಣೆ ತಿಳಿಸಿದೆ.
























