
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಕಳ ಮೈನ್ ಕಾರ್ಕಳ ಇಲ್ಲಿ ದಾನಿಗಳ ನೆರವಿನಿಂದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್,ಕೊಡೆ, ಬ್ಯಾಗ್ ವಿತರಣಾ ಕಾರ್ಯಕ್ರಮ ನಡೆಯಿತು.

ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ (ರಿ.) ನಿಟ್ಟೆ ಮತ್ತು ರೋಟರಿ ಕ್ಲಬ್ ನಿಟ್ಟೆ ಇವರಿಂದ ನೋಟ್ ಬುಕ್ , ಬೋಳಾ ಸುರೇಂದ್ರ ಕಾಮತ್ ಮೆಮೊರಿಯಲ್ ಚಾರಿಟೇಬಲ್ ಟ್ರಸ್ಟ್ ಮತ್ತು ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಕೊಡೆ ಮತ್ತು ನೋಟ್ ಪುಸ್ತಕ ಹಾಗೂ ಮಹಾದೇವ ಗಾರ್ಮೆಂಟ್ಸ್ ಕಾರ್ಕಳ ಇವರಿಂದ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು.
ಬಿ.ಆರ್.ಸಿ ಕೋ ಆರ್ಡಿನೇಟರ್ ಸಂತೋಷ್ ಕುಮಾರ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ) ಇದರ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ ವಿದ್ಯಾರ್ಥಿಗಳಿಗೆ ಕೊಡೆ ಮತ್ತು ನೋಟ್ ಪುಸ್ತಕ ವಿತರಣೆ ಮಾಡಿದರು.
ಮಹಾದೇವ ಗಾರ್ಮೆಂಟ್ಸ್ ಕಾರ್ಕಳದ ಮಾಲೀಕರಾದ ರಾಜೇಶ್ ಮತ್ತು ಗೌರವ್ ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಪುರಸಭೆಯ ವಾರ್ಡ್ ಮೆಂಬರ್ ಸುಮಾ ಕೇಶವ್, ಶಾಲಾ ಪೂರ್ವ ವಿದ್ಯಾರ್ಥಿ ಹಾಗೂ ಪುರಸಭಾ ಸದಸ್ಯ ಪ್ರದೀಪ್ ರಾಣೆ, ಪುರಸಭೆ ಸದಸ್ಯೆ ಭಾರತಿ ಅಮಿನ್, ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷ ಪರಸಪ್ಪ ಜೋಗಿನ, ಶಿಕ್ಷಕಿಯರಾದ ಮಧುಶ್ರೀ, ಪೂಜಾ, ಶಾಲಾ ಎಸ್ ಡಿ ಎಂ ಸಿ ಸದಸ್ಯರು, ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಮಾಲಾಶ್ರೀ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಶಿಕ್ಷಕಿ ಶಶಿಕಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪದವೀಧರ ಸಹ ಶಿಕ್ಷಕಿ ಪ್ರತಿಮಾ ದೇವದಾಸ್ ಸ್ವಾಗತಿಸಿದರು. ಶಿಕ್ಷಕಿಯರಾದ ಅಶ್ವಿನಿ ನಿರೂಪಿಸಿದರು, ಶ್ರೇಯಾ ವಂದಿಸಿದರು.