ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಕಾರ್ಕಳ: ಜುಲೈ 7ರಂದು ರಂದು, ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ ಮತ್ತು ಸರಕಾರಿ ಜಿಲ್ಲಾ ಆಸ್ಪತ್ರೆ ರಕ್ತ ನಿಧಿ ವಿಭಾಗ ಅಜ್ಜರಕಾಡು ಉಡುಪಿ ಇವರ ಸಹಯೋಗದಿಂದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ.
ಆದಿತ್ಯವಾರದಂದು ಬೆಳಗ್ಗೆ 9:00 ರಿಂದ ಮಧ್ಯಾಹ್ನದ 2 ರವರೆಗೆ ಗುರುದೀಪ್ ಗಾರ್ಡನ್ ಸಾಲ್ಮರ ಕಾರ್ಕಳದಲ್ಲಿ ಈ ರಕ್ತದಾನ ಶಿಬಿರ ನಡೆಯಲಿದೆ.
ಕಾರ್ಕಳದ ರೆಡ್ ಕ್ರಾಸ್ ಅಧ್ಯಕ್ಷರಾದ ಡಾ|| ಕೆ ಆರ್ ಜೋಶಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಡಾ||ಮೀನಾ ಕುಮಾರಿ ಎಂ (ಪ್ಯಾಥಲೋಜಿಸ್ಟ್ ಬಿ.ಸಿ. ಎಂ. ಓ.ಡಿ. ಹೆಚ್) ಹಾಗೂ ಉದ್ಯಮಿ ಮತ್ತು ಸಮಾಜಸೇವಕರಾದ ಪ್ರಶಾಂತ್ ಕಾಮತ್ ಪಾಲ್ಗೊಳ್ಳಲಿದ್ದಾರೆ.