
ಕಾರ್ಕಳ: ಡಿಸೆಂಬರ್ 15 ರಂದು ಶ್ರೀ ಶ್ರೀ ರವಿಶಂಕರ ವಿದ್ಯಾ ಮಂದಿರದಲ್ಲಿ ಬಾಲ ಮಂದಿರದಿಂದ ಪೂರ್ವ ಪ್ರಾಥ ಮಿಕ ಮಕ್ಕಳಿಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಂತಹ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಸುಮಂಗಲ ಪೈ, ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಈದು ಹೊಸ್ಮಾರು ಹಾಗೂ ಅಕ್ಷರ ಆಯುರ್ವೇದ ಆಸ್ಪತ್ರೆ ಜೋಡುರಸ್ತೆ ಕಾರ್ಕಳ, ಇಲ್ಲಿನ ವೈದ್ಯಾಧಿಕಾರಿಗಳಾದ ಡಾ.ಬಾಲಸುಬ್ರಹ್ಮಣ್ಯ.ಕೆ ಇವರು ಆಗಮಿಸಿ, ಬಹುಮಾನ ವಿತರಣಾ ಕಾರ್ಯಕ್ರಮವನ್ನು ಅಂದಗಾಣಿಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಲ್ ಕಾಮತ್, ಸಂಯೋಜಕರಾದ ಶ್ರೀಮತಿ ಅಂಬಿಕಾ, ಶ್ರೀಮತಿ ಅನಸೂಯ, ಪೋಷಕರು, ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.