32.5 C
Udupi
Wednesday, April 30, 2025
spot_img
spot_img
HomeBlogಇಂದು ಸಂಜೆ 5:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3...

ಇಂದು ಸಂಜೆ 5:30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3 ತಾಸಿನ ಪಾಡ್‌ಕಾಸ್ಟ್‌ ಪ್ರಸಾರ

ನವದೆಹಲಿ: ಇಂದು ಸಂಜೆ 5.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಕುರಿತು ಕುತೂಹಲಕಾರಿ ಅಂಶಗಳುಳ್ಳ 3 ತಾಸಿನ ಪಾಡ್‌ಕಾಸ್ಟ್‌ ಪ್ರಸಾರವಾಗಲಿದೆ.

ಕೃತಕ ಬುದ್ಧಿಮತ್ತೆ ಸಂಶೋಧಕ ಹಾಗೂ ಖ್ಯಾತ ಪಾಡ್‌ಕಾಸ್ಟರ್‌ ಲೆಕ್ಸ್ ಫ್ರಿಡ್‌ಮನ್ ಅವರು ಮೋದಿ ಸಂದರ್ಶನ ನಡೆಸಿದ್ದು ಈ ಕುರಿತು ಟ್ವೀಟ್ ಮಾಡಿರುವ ಮೋದಿ ‘ಇದು ನಿಜಕ್ಕೂ ಫ್ರಿಡ್‌ಮನ್‌ ಅವರೊಂದಿಗಿನ ಆಕರ್ಷಕ ಸಂಭಾಷಣೆಯಾಗಿತ್ತು, ನನ್ನ ಬಾಲ್ಯ, ಹಿಮಾಲಯದಲ್ಲಿನ ವರ್ಷಗಳು ಮತ್ತು ಸಾರ್ವಜನಿಕ ಜೀವನದ ಪ್ರಯಾಣವನ್ನು ನೆನಪಿಸಿಕೊಳ್ಳುವುದು ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ಒಳಗೊಂಡಿದೆ. ಟ್ಯೂನ್ ಮಾಡಿ ಮತ್ತು ಈ ಸಂವಾದದ ಭಾಗವಾಗಿರಿ!’ ಎಂದು ಬರೆದುಕೊಂಡಿದ್ದಾರೆ.

ಫ್ರಿಡ್‌ಮನ್‌ ಕೂಡ ಈ ಕುರಿತು ಟ್ವೀಟ್‌ ಮಾಡಿದ್ದು, ‘ಇದು ನನ್ನ ಜೀವನದ ಅತ್ಯಂತ ಶಕ್ತಿಶಾಲಿ ಸಂಭಾಷಣೆಗಳಲ್ಲಿ ಒಂದಾಗಿದೆ. ಮೋದಿ ನವರಾತ್ರಿ ವೇಳೆ 9 ದಿನ ಉಪವಾಸ ಮಾಡುತ್ತಾರೆ. ನಾನು ಕೂಡ ಮೋದಿ ಜತೆ ಮಾತಾಡುವ ಮುನ್ನ 3 ದಿನ ಉಪವಾಸ ಮಾಡಿದೆ’ ಎಂದಿದ್ದಾರೆ.

ಈ ಹಿಂದೆ ಫ್ರಿಡ್‌ಮನ್ ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್, ಮಾರ್ಕ್ ಜುಕರ್‌ಬರ್ಗ್, ಜೆಫ್ ಬೆಜೋಸ್ ಮತ್ತು ವೊಲೊಡಿಮಿರ್ ಜೆಲೆನ್ಸ್ಕಿ ಸೇರಿ ಉನ್ನತ ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ ಪಾಡ್‌ಕಾಸ್ಟ್‌ ನಡೆಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page