29.4 C
Udupi
Saturday, June 13, 2026
spot_img
spot_img
HomeBlogಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆ ಹಿರಿಯಂಗಡಿ ಕಾರ್ಕಳ, ಪ್ರತಿಭಾ ಪುರಸ್ಕಾರ

ಸ್ವಸ್ತಿಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆ ಹಿರಿಯಂಗಡಿ ಕಾರ್ಕಳ, ಪ್ರತಿಭಾ ಪುರಸ್ಕಾರ


ಪ್ರತಿಭಾ ಪುರಸ್ಕಾರ: ಸ್ವಸ್ತಿ ಶ್ರೀ ನೇಮಿಸಾಗರ ವರ್ಣೀಜಿ ಪ್ರೌಢಶಾಲೆಯಲ್ಲಿ ಸಮಾಜ ಬಾಂಧವರು ಹಾಗೂ ಆಡಳಿತ ಮಂಡಳಿಯವರು ಇರಿಸಿದ ಧ್ರುವ ನಿಧಿಯಿಂದ 2025 -26 ನೇ ಸಾಲಿನ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಶಾಲಾ ಸಂಚಾಲಕರಾದ ಶ್ರೀ ಅನಂತ ರಾಜ್ ಪೂವಣಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ 2025-26ನೇ ಸಾಲಿನ ಎಸ್. ಎಸ್ .ಎಲ್ .ಸಿ .ಪರೀಕ್ಷೆಯಲ್ಲಿ 106 ವಿದ್ಯಾರ್ಥಿಗಳಲ್ಲಿ 106 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 100% ಫಲಿತಾಂಶವನ್ನು ದಾಖಲಿಸಿ ಸಂಸ್ಥೆಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಲಾಯಿತು.617 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 9ನೇ ರಾಂಕ್ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾದ ಕುಮಾರಿ ಕೆ ವಿಶಲ್ಯ ಕಾಮತ್ ಇವಳಿಗೆ ಆಡಳಿತ ಮಂಡಳಿಯ ವತಿಯಿಂದ ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು ಹಾಗೂ ಶಾಲೆಗೆ ದ್ವಿತೀಯ ಸ್ಥಾನ ಪಡೆದ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ಕು. ವೈಷ್ಣವಿ ಭಟ್ ಮತ್ತು ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ಕು. ತಬ್ ಸೀರ ಹಾಗೂ ದ್ವಿತೀಯ ಸ್ಥಾನ ಪಡೆದ ಕು ತ್ರಿನೇತ್ರ ಈ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 18 ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.

ಸಮಾರಂಭದ ವೇದಿಕೆಯಲ್ಲಿ ಶಾಲಾ ಸಂಚಾಲಕರಾದ ಅನಂತ ರಾಜ್ ಪೂವಣಿ, ಕಾಲೇಜು ವಿಭಾಗದ ಪ್ರಾಂಶುಪಾಲರಾದ ಪ್ರದೀಪ್ ಎನ್, ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯನಿ ಶ್ರೀಮತಿ ಉಷಾ ಪಡಿವಾಳ್ ಹೆಚ್,ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯನಿ ಶ್ರೀಮತಿ ಶರ್ಮಿಳಾ ಹೆಗ್ಡೆ, ಹಾಗೂ ದಾನಿಗಳಾದ ಶ್ರೀಮತಿ ಸುಜಾತ ಎಸ್ ಭಂಡಾರಿ ಯವರು ಉಪಸ್ಥಿತರಿದ್ದರು. ಶಾಲಾ ಸಂಚಾಲಕರಾದ ಅನಂತ ರಾಜ್ ಪೂವಣಿಯವರು ಮಾತನಾಡಿ ಕಠಿಣ ಪರಿಶ್ರಮ ಸಾಧನೆಯಿಂದ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಬಹುದು ಶಿಕ್ಷಕರ ಹಾಗೂ ಹೆತ್ತವರ ಮಾರ್ಗದರ್ಶನದಿಂದ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದೊಂದಿಗೆ ಶಿಸ್ತು ಸಂಯಮ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಬಾಳಿ ರೆಂದು ಶುಭ ಹಾರೈಸಿದರು, ಅಧ್ಯಾಪಕ ವೃಂದ,ಸಿಬ್ಬಂದಿ ವರ್ಗ ಹಾಗೂ ಷೋಷಕರು ಭಾಗವಹಿಸಿದರು. ಹಿರಿಯ ಶಿಕ್ಷಕ ಯೋಗರಾಜ್ ಜೈನ್ ಮತ್ತು ಸಹ ಶಿಕ್ಷಕಿ ಶ್ರೀಮತಿ ಸಂಧ್ಯಾ ಕುಡ್ವ ರವರು ಕಾರ್ಯಕ್ರಮವನ್ನು ನಿರೂಪಿಸಿದರು, ಸಹ ಶಿಕ್ಷಕಿ ಶ್ರೀಮತಿ ಅಮೃತ ಗೋರೆ ವಂದಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page