
ಶ್ರಾವಣಮಾಸದಲ್ಲಿ ನಾಗಾರ ಪಂಚಮಿ, ವರಮಹಲಕ್ಷ್ಮಿ, ಶ್ರಾವಣ ಶನಿವಾರ, ಗೌರಿ – ಗಣೇಶ ಚತುರ್ಥಿಗಳು ಒಂದರ ಮೇಲೊಂದು ಹಬ್ಬಗಳು ಸಾಲು ಸಾಲಾಗಿ ಬರಲಿದ್ದು ಈ ಅವಧಿಯಲ್ಲಿ ತರಕಾರಿ, ಹೂ, ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ, ಕ್ಯಾರೆಟ್ ಬಿಟ್ರೂಟ್ ಬೆಲೆ ವಿಪರೀತ ಜಾಸ್ತಿಯಾಗಿದೆ.
ಬೆಂಗಳೂರು: ಇದೀಗ ಶ್ರಾವಣ ಮಾಸ ಆರಂಭವಾಗಿ ಹೂ, ಹಣ್ಣು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗಿದ್ದು ಕಳೆದ ವಾರಕ್ಕಿಂತ ಈ ವಾರ ತರಕಾರಿಗಳ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾದರೆ ಹೂವಿನ ಬೆಲೆ 200 ರೂಪಾಯಿಯಷ್ಟು ಏರಿಕೆ ಮಾಡಿದ್ದಾರೆ.
ತರಕಾರಿಗಳ ಬೆಲೆ:
ನಾಟಿ ಬೀನ್ಸ್ 100
ಟೊಮೆಟೊ 50
ಬಿಳಿ ಬದನೆ. 120
ಮೆಣಸಿನಕಾಯಿ 80
ನುಗ್ಗೆಕಾಯಿ 200
ಊಟಿ ಕ್ಯಾರೆಟ್ 200
ನವಿಲುಕೋಸು. 60
ಮೂಲಂಗಿ. 60
ಹೀರೇಕಾಯಿ 80
ಆಲೂಗಡ್ಡೆ 60
ಈರುಳ್ಳಿ 60
ಕ್ಯಾಪ್ಸಿಕಂ. 85
ಹಾಗಲಕಾಯಿ. 85
ಕೊತ್ತಂಬರಿ ಸೊಪ್ಪು 70
ಶುಂಠಿ. 185
ಬೆಳ್ಳುಳ್ಳಿ. 350
ಪಾಲಕ್. 46
ಪುದಿನ 92
ನಾಟಿ ಬಟಾಣಿ 300
ಫಾರಂ ಬಟಾಣಿ 200
ಹಣ್ಣುಗಳ ಬೆಲೆ:
ಸೇಬು 350, ದ್ರಾಕ್ಷಿ 300, ಮೂಸಂಬಿ 140, ಸಪೋಟ 200, ಡ್ರಾಗಾನ್ ಪ್ರೋಟ್ 200, ಬಟರ್ ಫ್ರೋಟ್ 250, ಏಲಕ್ಕಿ ಬಾಳೆಹಣ್ಣು 80, ಪೊಪ್ಪಾಯ 50, ಕಲ್ಲಂಗಡಿ 50, ಅನಾನಸ್ 120, ಕಿವಿ ಫ್ರೋಟ್ 120, ಕಿತ್ತಳೆ 200
ಹೂಗಳ ದರ:
ಸೇವಂತಿಗೆ 250, ಗುಲಾಬಿ 200, ಅಣಗಲು 200, ಸುಗಂದರಾಜ 100, ಮಲ್ಲಿಗೆ 300, ಕನಕಾಂಬರ 300, ಚೆಂಡೂ ಹೂ 20, ತುಳುಸಿ 40, ವೈಟ್ ಸೇವಂತಿಗೆ 150, ಹಳದಿ ಸೇವಂತಿಗೆ ಮೊಳಕ್ಕೆ 250, ಕಾಕಡ ಕೆಜಿಗೆ 400, ಸಂಪಿಗೆ 200 ರೂ. ಗೆ ಮಾರಾಟ ಮಾಡಲಾಗುತ್ತಿದೆ













