
ಬೆಂಗಳೂರು: ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಜಿ. ಪರಮೇಶ್ವರ್ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗಲು ಅವರು ಕೇಳಿದಂತೆ ಸಮಯ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಪ್ರಜ್ವಲ್ ವಕೀಲರ ಮೂಲಕ ಒಂದು ವಾರ ಸಮಯ ಕೇಳಿದ್ದು ಆದರೆ ಹಾಗೆ ಸಮಯವನ್ನ ತೆಗೆದುಕೊಳ್ಳಲು ಆಗಲ್ಲ. ಸೆಕ್ಷನ್ 41 (ಎ) ನಲ್ಲಿ ಸಮಯವನ್ನ ಕೊಡಲು ಬರುವುದಿಲ್ಲ. ಎಸ್‍ಐಟಿ ನೋಟಿಸ್ ನೀಡಿದ್ದು ರೇವಣ್ಣ ಇಂದು ವಿಚಾರಣೆಗೆ ಹಾಜಾರಾಗುವುದಾಗಿ ಹೇಳಿದ್ದಾರೆ. ಇನ್ನು ಸಿಎಂ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಘಟನೆಯ ಬಗ್ಗೆ ವಿವರಿಸಿ, ಡಿಪ್ಲಾಮೆಟಿಕ್ ಪಾಸ್ ಪೋರ್ಟ್ ರದ್ದು ಮಾಡಿ ಆದಷ್ಟು ಬೇಗ ಕರೆದುಕೊಂಡು ಬರೋದಕ್ಕೆ ಸಹಕರಿಸಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಿದರು.













































































































