ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ,80ನೇ ಸ್ವಾತಂತ್ರ್ಯ ದಿನಾಚರಣೆ

ನಮ್ಮ ದೇಶಕ್ಕೆ ಕೇವಲ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಸಿಕ್ಕಿದ್ದಲ್ಲ. ಶಿವಾಜಿ ಮಹಾರಾಜರು ಮತ್ತು ಇನ್ನಿತರ ಸ್ವಾತಂತ್ರ್ಯ ವೀರರ ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿರುತ್ತದೆ. ದೇಶದ ಒಗ್ಗಟ್ಟಿಗೆ ಹಾಗೂ ಪ್ರಗತಿಗಾಗಿ ಶ್ರಮಿಸಿ ನಾವು ಸ್ವಾತಂತ್ರ್ಯವನ್ನು ಆಚರಿಸಬೇಕು ಎಂದು ಕಾರ್ಕಳದ ಖ್ಯಾತ ಉದ್ಯಮಿ ಎಸ್ ನಿತ್ಯಾನಂದ ಪೈ ಹೇಳಿದರು.
ಅವರು ಶ್ರೀಮದ್ ಭುವನೇಂದ್ರ ಪ್ರೌಢಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಎನ್‌ಸಿಸಿ ಹಾಗೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ಎನ್‌ಸಿಸಿ ಕೆಡೆಟ್ ವಿನಿತ್ ಇವರು ಪೆರೇಡ್ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಆರ್. ನಾರಾಯಣ ಶೆಣೈ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ವಿದ್ಯಾಕಿಣಿ, ಹಿರಿಯ ಶಿಕ್ಷಕಿಯರಾದ ನಯನಾ ಶೆಣೈ ಹಾಗೂ ಸೀಮಾ ಕಾಮತ್ ಇವರು ಎನ್‌ಸಿಸಿ ಕೆಡೆಟ್ ಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕ ಪ್ರದಾನ ಮಾಡಿದರು. ಎನ್‌ಸಿಸಿ ಅಧಿಕಾರಿ ಭವ್ಯಾ ಕಿಣಿ ಇವರು ಎ ಸರ್ಟಿಫಿಕೇಟ್ ಪಡೆದ ಎನ್‌ಸಿಸಿ ಕೆಡೆಟ್ ಗಳ ವಿವರ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂಜಯ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.













































































































