
ವರ್ಧಮಾನ ವಿದ್ಯಾಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್, & ಗೈಡ್ಸ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳಿಂದ “ಸರ್ವಧರ್ಮ ಪ್ರಾರ್ಥನೆ” ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು, ಕಾರ್ಕಳ ಇಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕಿ ಶಶಿಕಲಾ ಕೆ ಹೆಗ್ಡೆ ಯವರು ನಮ್ಮ ಭಾರತ ದೇಶದಲ್ಲಿ ಹಲವಾರು ಜಾತಿ, ಮತ, ಧರ್ಮಗಳಿವೆ. ಆದರೆ ಎಲ್ಲಾ ಧರ್ಮಗಳು ಬೋಧಿಸುವುದು ಮಾನವೀಯತೆ, ಶಾಂತಿ, ಸಹ ಬಾಳ್ವೆ. ಗಾಂಧೀಜಿಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಮಕ್ಕಳಿಗೆ ವಿವರಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಸರ್ವಧರ್ಮ ಪ್ರಾರ್ಥನೆಯನ್ನು ವಿದ್ಯಾರ್ಥಿಗಳಾದ ಚಿತ್ರಾ ಪೈ, ಎಲೀಷ ಆಳ್ವ, ರಾಯಿಸ್ , ಶ್ರುತ ಜೈನ್, ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ಸೌಮ್ಯ, ಪ್ರಿಯಾ, ಸ್ಮಿತಾ, ಸ್ವಾತಿ, ವಾಣಿ, ದೀಪಿಕಾ ಉಪಸ್ಥಿತರಿದ್ದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.









































