
ಉಡುಪಿ: ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 6ರವರೆಗೆ ಮಧ್ಯಾವಧಿ ದಸರಾ ರಜೆ ಘೋಷಿಸಲಾಗಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಿಬಿಎಸ್ಇ ಶಾಲೆಗಳಿಗೂ ಸಪ್ಟೆಂಬರ್ 20 ರಿಂದ ಮಧ್ಯಾವಧಿ ರಜೆ ಪ್ರಾರಂಭವಾಗಿ ಅಕ್ಟೋಬರ್ 2 ರವರೆಗೆ ಮುಂದುವರೆಯಲಿದೆ. ಆದರೆ ಸಿಬಿಎಸ್ಇ ಶಾಲೆಗಳ ಕೆಲ ಆಡಳಿತ ಮಂಡಳಿಗಳಲ್ಲಿ ರಜಾ ಅವಧಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರುವ ಸಾಧ್ಯತೆಯಿದ್ದು ದೀಪಾವಳಿ ಹಾಗೂ ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚು ದಿನ ರಜೆ ನೀಡುವ ಕೆಲವು ಶಾಲೆಗಳು ದಸರಾ ರಜೆಯನ್ನು ಕಡಿಮೆ ನೀಡುತ್ತದೆ. ಇದಲ್ಲದೆ ಕೆಲವು ಶಾಲೆಗಳು ಫಲಿತಾಂಶ ಸುಧಾರಣೆ ದೃಷ್ಟಿಯಿಂದ ಮಧ್ಯಾವಧಿ ರಜಾ ದಿನಗಳಲ್ಲಿ ವಿಶೇಷ ತರಗತಿಗಳನ್ನು ನಡೆಸುವ ಸಾಧ್ಯತೆಯಿದೆ.



















