
ಶ್ರೀ ಶಾರದಾ ಪೂಜೆಯ ಶುಭ ಸಂದರ್ಭದಲ್ಲಿ ಕಾರ್ಕಳದ ಮಂಜುನಾಥ ಪೈ ಸಭಾಂಗಣದಲ್ಲಿ ನಡೆದ ಶ್ರೀ ಶಾರದಾ ಪೂಜಾ ಸಮಿತಿ ಕಾರ್ಕಳ ಇವರು ಆಯೋಜಿಸಿದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದ ವಿದ್ಯಾರ್ಥಿಗಳಾದ
ಶಾನ್ವಿ ಎಚ್. ದೇವಾಡಿಗ, ಪ್ರಜ್ಞಾ ಪುತ್ರನ್, ಅನ್ಶಿ ಅಂಚನ್ ಹಾಗೂ ಶ್ರೀಲಕ್ಷ್ಮಿ ಭಟ್ ಅವರು ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಇವರಿಗೆ ಶಾಲಾ ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದ ಅಭಿನಂದಿಸಿರುತ್ತಾರೆ.






















