ಕಥೆ (ಭಾಗ- 20)
ಚೇತನ್ ವರ್ಕಾಡಿ

ಮಂಗಳ
ಭಾಗ(20)
✍🏻ಚೇತನ್. ವರ್ಕಾಡಿ…
ಸುಗಂಧಿ ಅವಸರವಸರವಾಗಿ ಬಾಗಿಲು ತೆಗೆಯಲು ಹೋದರೆ…!ಎದುರಿದ್ದವರು ಸೌಂಧರ್ಯಳ ತಂದೆ ಸುಂದರರಾಯರು.ಸುಗಂಧಿಗೆ ಮಾತುಗಳು ಹೊರಡದಾಯಿತು.ಅದು ಸಂಜೆ 5ಗಂಟೆ ಕಳೆದ ಸಮಯವಾಗಿತ್ತು.ಇಷ್ಟು ಹೊತ್ತಿಗೆ ಸುಂದರರಾಯರು ಹೇಳದೆ ಕೇಳದೆ ಸಡನ್ನಾಗಿ ಯಾಕೆ ಬಂದಿರಬಹುದು,ಅದೂ ಅಲ್ಲದೆ ಮಧು ಇನ್ನೂ ಸೌಂಧರ್ಯಳನ್ನು ಮದುವೆಯಾಗಲು ಒಪ್ಪಿಗೆ ನೀಡಿಲ್ಲ…!ಆದರೂ ಬಂದ ಅತಿಥಿಯನ್ನು ಕಾಯಿಸದೆ ಒಳಗೆ ಕರೆದು ಆಸನ ಸ್ವೀಕರಿಸಲು ಹೇಳಿದರು.ಸುಂದರರಾಯರನ್ನು ನೋಡಿದ ಮಧುವಿನ ತಂದೆ ಸೋಮಶೇಖರರಾಯರು ಅವರ ಬಳಿ ಬಂದು ಕುಳಿತರು.ಎಲ್ಲವನ್ನೂ ಕಣ್ಣರಳಿಸಿ ನೋಡುತ್ತಿದ್ದ ಮಿಥುನ್‌ಗೆ ಸುಂದರರಾಯರ ಪರಿಚಯವಿರಲಿಲ್ಲ.ಯಾರು ಆಂಟಿ ಇವರು ಎಂದು ಸುಗಂಧಿ ಕೇಳಬೇಕಾದರೆ,ಓ ಮಧು ನಿನಗೆ ಈ ವಿಚಾರ ಹೇಳಿಲ್ಲ ಅಂತ ಕಾಣಿಸುತ್ತೆ ಎಂದು ಎಲ್ಲಾ ವಿಚಾರವನ್ನು ಮಿಥುನ್ ಬಳಿ ಹೇಳತೊಡಗಿದಳು.ತನ್ನ ಆಪ್ತಮಿತ್ರ ಯಾಕೆ ಈ ವಿಚಾರವನ್ನು ತನ್ನ ಬಳಿ ಮುಚ್ಚಿಟ್ಟ ಅದೂ ಅಲ್ಲದೆ ಮದುಮಗನ ಕಳೆ ಮಧುವಿನ ಮುಖದಲ್ಲೂ ಕಾಣುತ್ತಿಲ್ಲ ಏನಿದರ ಒಳಗುಟ್ಟು ಎಂದು ತನ್ನಲ್ಲೆ ಪ್ರಶ್ನೆ ಹಾಕುತ್ತಿದ್ದರೆ..!ಮೇಲಿನ ಮಹಡಿಯಿಂದ ಮಧು ಬರುತ್ತಿರುವುದು ಕಾಣುತ್ತಿತ್ತು. ಮಧು ಸಡನ್ನಾಗಿ ಸುಂದರರಾಯರನ್ನು ಕಂಡು ಅಲ್ಲೇ ನಿಂತುಬಿಟ್ಟ, ಇದನ್ನು ನೋಡಿದ ಸುಂದರರಾಯರು ಬನ್ನಿ ಅಳಿಯಂದ್ರೆ ಕುಳಿತುಕೊಳ್ಳಿ ಎಂದು ಹೇಳಬೇಕಾದರೆ ಮನಸಿಲ್ಲದೆ ಆಯ್ತು ಅಂಕಲ್ ಎಂದು ಮಿಥುನ್ ಬಳಿ ಬಂದು ಕುಳಿತ..ಸುಂದರರಾಯರು ಮಧುವಿನ ಹತ್ತಿರ ಬಂದು ನಿನಗೆ ಸೌಂಧರ್ಯ ಇಷ್ಟ ಆಗಿಲ್ವ ಎಂದು ಕೇಳಬೇಕಾದರೆ…!ಸಡನ್ನಾಗಿ ಇಲ್ಲ ಅಂತಾನೆ ಹೇಳ್ಬಿಟ್ಟ ಮಧು.ಎಲ್ಲರ ಕಣ್ಣುಗಳು ಮಧುವಿನತ್ತ ನೇರದೃಪ್ಟಿಯನ್ನು ಬೀರುತ್ತಿತ್ತು.ಸುಂದರರಾಯರಿಗೆ ಮಗಳ ಮುಂದಿನ ಜೀವನದ ಬಗ್ಗೆ ಯೋಚನೆಯೆ ಕಾಡತೊಡಗಿತು.ಮಧು ಸಿಗದಿದ್ದರೆ ತನ್ನ ಮಗಳು ಹುಚ್ಚಿಯಾಗುವುದಂತೂ ಖಂಡಿತ ಎಂದು ಮನದಲ್ಲೇ ನೋವನ್ನು ಅನುಭಿಸುತ್ತಿದ್ದ ಅವರ ಯಾತನೆ ಮುಖದಲ್ಲಿ ಎದ್ದು ಕಾಣುತ್ತಿತ್ತು.ಮಧುವಿಲ್ಲದ ಸೌಂಧರ್ಯಳ ಬದುಕು ಅವರಿಗೆ ಊಹಿಸಲು ಅಸಾಧ್ಯವಾಯಿತು.ಯಾರ ಮಾತು ಕೇಳದ ಮಧು ಒಬ್ಬಂಟಿಯಾಗಿ ಕುಳಿತಿದ್ದ. ಗೆಳೆಯನ ಆ ನೋವನ್ನು ಪಕ್ಕದಲ್ಲೇ ಕುಳಿತು ನೋಡುತ್ತಿದ್ದ ಮಿಥುನ್‌ಗೆ ಮಧುವಿನ ಮನಸಿನ ಗಾಯಕ್ಕೆ ಔಷಧಿ ಹಚ್ಚಲೇಬೇಕೆಂದೆನಿಸಿತು.ಸುಂದರರಾಯರಿಗೆ ಮಧುವನ್ನು ಒಪ್ಪಿಸದೆ ಮನೆಗೆ ಹಿಂತಿರುಗುವಂತಿರಲಿಲ್ಲ!ತನ್ನ ಮುದ್ದು ಮಗಳಿಗೆ ಈ ತನಕ ಯಾವ ಕೊರತೆಯೂ ಬಾರದಂತೆ ಸಾಕಿಸಲಹಿದ ಮುದ್ದು ತಂದೆ ಅವರಾಗಿದ್ದರು.ಎಲ್ಲವೂ ಕೈಮೀರಿತೆಂದು ಕಡೆಗೊಂದು ಬಾರಿ ಪ್ರಯತ್ನ ಮಾಡೋಣವೆಂದು ಸೀದಾ ಮಧುವಿನ ಕಡೆಗೆ ಬಂದವರೆ ಮಧುವಿನ ಕಾಲು ಹಿಡಿದು ಬೇಡಿಕೊಂಡರು.ಅವರ ಕಣ್ಣುಗಳಿಂದ ಜಾರಿದ ನೋವಿನ ಹನಿಗಳು ಮಧುವಿನ ಪಾದಕ್ಕೆ ಸ್ಪರ್ಶಿಸಿದಾಗ…..?
(ಮುಂದುವರಿಯುವುದು)













