
ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ವರ್ಗ 2026 ರ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಕಾರ್ಕಳ ಮಂಡಲವು ಪಕ್ಷದ ಕಾರ್ಯಕರ್ತರಿಗಾಗಿ ಎರಡು ದಿನಗಳ ಪ್ರಶಿಕ್ಷಣವರ್ಗವನ್ನು ಆಯೋಜಿಸಿದ್ದು, ದಿನಾಂಕ 24-04-2026 ರ ಶುಕ್ರವಾರ ಸಾಣೂರು ರಾಧಾ ಫಾರ್ಮ್ಸ್ ಆವರಣದಲ್ಲಿ ಉದ್ಘಾಟನೆಗೊಂಡಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬೋಳ ಪ್ರಭಾಕರ ಕಾಮತ್ ರವರು ನೆರವೇರಿಸಿದರು. ಕಾರ್ಕಳ ಬಿಜೆಪಿಯ ಮಂಡಲಾಧ್ಯಕ್ಷರಾದ ನವೀನ್ ನಾಯಕ್, ಕಾರ್ಕಳ ಶಾಸಕರಾದ ವಿ ಸುನಿಲ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಪ್ರಶಿಕ್ಷಣ ವರ್ಗ ಕಾರ್ಕಳ ಮಂಡಲದ ಸಂಯೋಜಕರಾದ ರವೀಂದ್ರ ಕುಮಾರ್ ಹಾಗೂ ಪಕ್ಷದ ಪ್ರಮುಖರಾದ ಮಣಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಪಕ್ಷದ 400 ಕ್ಕೂ ಅಧಿಕ ಮಂದಿ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಎರಡು ದಿನಗಳ ಈ ಕಾರ್ಯಕ್ರಮ ಏಪ್ರಿಲ್ 24 ಮತ್ತು 25 ರಂದು ನಡೆಯಲಿದ್ದು 25 ರಂದು ಸಮಾರೋಪಗೊಳ್ಳಲಿದೆ.













