
ಬೆಂಗಳೂರು: ಮದುವೆಯಾಗುವುದಾಗಿ ಭರವಸೆ ನೀಡಿ ಯುವತಿಯನ್ನು ಗರ್ಭಿಣಿಯಾಗಿಸಿದ ಪುತ್ತೂರು ಮೂಲದ ಪ್ರಕರಣದಲ್ಲಿ, ಬಿಜೆಪಿ ಮುಖಂಡ ಜಗನ್ನಾಥ್ ರಾವ್ ಅವರ ಪುತ್ರ ಕೃಷ್ಣ ಜೆ. ರಾವ್ ವಿರುದ್ಧ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಸಂತ್ರಸ್ತೆಗೆ ಪ್ರತಿ ತಿಂಗಳು 75 ಸಾವಿರ ರೂಪಾಯಿ ಜೀವನಾಂಶ ನೀಡುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಅರ್ಜಿಯನ್ನು ಪರಿಶೀಲಿಸಿ, ಯುವತಿ ಹಾಗೂ ಮಗುವನ್ನು ನಿರ್ಲಕ್ಷ್ಯ ಮಾಡುವುದು ಅಸ್ವೀಕಾರಾರ್ಹ. ತಂದೆಯಾಗಿ ಮಗುವಿನ ಜವಾಬ್ದಾರಿ ಹೊರುವುದು ಆರೋಪಿಯ ಕರ್ತವ್ಯ ಎಂಬುದನ್ನು ನ್ಯಾಯಾಲಯ ಉಲ್ಲೇಖಿಸಿದೆ.
ಒಂದು ತಿಂಗಳ ಅವಧಿಯೊಳಗೆ 75 ಸಾವಿರ ರೂಪಾಯಿಯನ್ನು ತಕ್ಷಣ ನೀಡಬೇಕು ಎಂದು ನ್ಯಾಯಾಲಯ ಸೂಚಿಸಿದ್ದು ಮುಂದುವರೆದು ಪ್ರತಿ ತಿಂಗಳು ಸಮಾನ ಮೊತ್ತವನ್ನು ಜೀವನಾಂಶವಾಗಿ ಪಾವತಿಸುವಂತೆ ಆದೇಶ ಹೊರಡಿಸಿದೆ.













