
ಟಿಡಿಎಸ್ ಕ್ರೆಡಿಟ್ ಅನ್ನು ಕ್ಲೈಮ್ ಮಾಡುವ ವಿಚಾರದಲ್ಲಿ ಸಮಸ್ಯೆ ಆಗುತ್ತಿದ್ದರೆ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಮಾರ್ಚ್ 31ರವರೆಗೆ ಸಮಯವಕಾಶ ಇದೆ.
ಪರಿಷ್ಕೃತ ಟಿಡಿಎಸ್ ಅನ್ನು ಸಲ್ಲಿಸುವಂತೆ ನಮ್ಮಿಂದ ಟಿಡಿಎಸ್ ಕಡಿತ ಮಾಡಿದ ಕಂಪನಿ ಅಥವಾ ಬ್ಯಾಂಕ್ ಅಥವಾ ಮತ್ಯಾವುದಾದರೂ ಸಂಸ್ಥೆಗೆ ನಾವು ಮನವಿ ಮಾಡಬೇಕಾಗುತ್ತದೆ. ಆರು ವರ್ಷದ ಬಳಿಕ ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಅವಕಾಶ ಇರುವುದಿಲ್ಲ.
ಮೂಲದಲ್ಲೇ ಕಡಿತಗೊಳಿಸಲಾಗುವ ತೆರಿಗೆಯನ್ನು ಟಿಡಿಎಸ್ ಎಂದು ಕರೆಯಲಾಗುತ್ತದೆ. ಎಫ್ಡಿ ಹಣ ಮೆಚ್ಯೂರ್ ಆದಾಗ ಬ್ಯಾಂಕ್ನವರು ನಿರ್ದಿಷ್ಟ ಟಿಡಿಎಸ್ ಅನ್ನು ಮುರಿದುಕೊಳ್ಳುತ್ತಾರೆ. ಈ ಟಿಡಿಎಸ್ ಹಣದ ಲೆಕ್ಕ ಆದಾಯ ತೆರಿಗೆಗೆ ಹೋಗುತ್ತದೆ. ಹಲವರಿಗೆ ಸಂಬಳ ನೀಡುವಾಗಲೇ ಟಿಡಿಎಸ್ ಮುರಿದುಕೊಂಡಿರಲಾಗುತ್ತದೆ. ಹೀಗೆ ನಮ್ಮಿಂದ ಯಾವುದೇ ಟಿಡಿಎಸ್ ಮುರಿದುಕೊಂಡಿದ್ದರೆ ಅದು ನಮ್ಮ ಫಾರ್ಮ್ 26ಎಎಸ್ ಅಥವಾ ಎಐಎಸ್ನಲ್ಲಿ (ಆ್ಯನುಯಲ್ ಇನ್ಫಾರ್ಮೇಶನ್ ಸ್ಟೇಟ್ಮೆಂಟ್) ನಮೂದಾಗುತ್ತದೆ. ಹೀಗೆ ನಮೂದಾಗಬೇಕಾದರೆ ಟಿಡಿಎಸ್ ಡಿಡಕ್ಟರ್ಗಳು ಟಿಡಿಎಸ್ ರಿಟರ್ನ್ ಫೈಲ್ ಮಾಡಿರಬೇಕು. ನಮ್ಮ ಪ್ಯಾನ್ ನಂಬರ್ ಇತ್ಯಾದಿ ಎಲ್ಲಾ ಸರಿಯಾದ ಮಾಹಿತಿಯೊಂದಿಗೆ ರಿಟರ್ನ್ ಸಲ್ಲಿಸಿರಬೇಕು. ಸರಿಯಾಗಿ ಸಲ್ಲಿಸದಿದ್ದರೆ ಫಾರ್ಮ್ 26ಎಎಸ್ ಮತ್ತು ಎಐಎಸ್ನಲ್ಲಿ ನಿಮ್ಮ ಟಿಡಿಎಸ್ ದಾಖಲೆಗಳು ನಮೂದಾಗಿರುವುದಿಲ್ಲ.
2024ರ ಬಜೆಟ್ನಲ್ಲಿ ಸರ್ಕಾರವು ಪರಿಷ್ಕೃತ ಟಿಡಿಎಸ್ ರಿಟರ್ನ್ಸ್ ಸಲ್ಲಿಸಲು ಕಾಲಮಿತಿ ಹಾಕಿದ್ದು ಪರಿಷ್ಕೃತ ಟಿಡಿಎಸ್ ರಿಟರ್ನ್ ಅನ್ನು ಆರು ವರ್ಷದ ಬಳಿಕ ಸಲ್ಲಿಸಲಾಗುವುದಿಲ್ಲ. ಟಿಡಿಎಸ್ ಡಿಡಕ್ಟರ್ಗಳು ಸರಿಯಾಗಿ ಟಿಡಿಎಸ್ ರಿಟರ್ನ್ ಫೈಲ್ ಮಾಡಿರದಿದ್ದರೆ ಅದನ್ನು ಸರಿಪಡಿಸಲು ಮಾರ್ಚ್ 31ರವರೆಗೆ ಕಾಲಾವಕಾಶ ಇರುತ್ತದೆ. ಈ ರೀತಿ ಟಿಡಿಎಸ್ ಡಿಡಕ್ಟರ್ಗಳು ಮಾಡಿದ ತಪ್ಪಿನಿಂದ 2007-08ರಿಂದ 2018-19ರ ಹಣಕಾಸು ವರ್ಷಕ್ಕೆ ಟಿಡಿಎಸ್ ಕ್ರೆಡಿಟ್ ಅನ್ನು ಕ್ಲೇಮ್ ಮಾಡಲು ಸಾಧ್ಯವಾಗದೇ ಇರುವವರು ಈ ಅವಕಾಶ ಬಳಸಿಕೊಳ್ಳಬಹುದಾಗಿದೆ.





















