ವರಂಗ ಶ್ರೀ ಪದ್ಮಾಂಬ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ

ಸ್ವಾತಂತ್ರ್ಯ ಹೋರಾಟಗಾರರ ಆದರ್ಶಗಳನ್ನು ಪರಿಪಾಲಿಸುವ ಮೂಲಕ ದೇಶಪ್ರೇಮವನ್ನು ಮೆರೆಯಬೇಕು. ದೇಶಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಸ್ಮರಿಸುವ ಮೂಲಕ ದೇಶಭಕ್ತರಿಗೆ ನಮನವನ್ನು ಸಲ್ಲಿಸಿದಾಗ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ ಆಚರಿಸಿದಂತಾಗುತ್ತದೆ. ಎಂದು ನಿವೃತ್ತ ಶಿಕ್ಷಕರಾದ ವೃಷಭದೇವ ಅಧಿಕಾರಿಯವರು ಹೇಳಿದರು.
ಅವರು ವರಂಗ ಶ್ರೀ ಪದ್ಮಾಂಬ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 78ನೇ ಸ್ವಾತಂತ್ರ್ಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ಆಡಳಿತ ಮಂಡಳಿಯ ಸದಸ್ಯರಾದ ಯುವರಾಜ ಇಂದ್ರ,ಉದ್ಯಮಿಯಾದ ನರಸಿಂಹ ಮಲ್ಯ ವರಂಗ, ವರಂಗ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಉಷಾ. ಎಂ. ಹೆಬ್ಬಾರ್,ಹಿರಿಯರಾದ ವಿಠಲ ಪೂಜಾರಿ,ಪಂಚಾಯತ್ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರಾದ ರತ್ನಾಕರ ಆರಿಗ ಇವರು ಸ್ವಾಗತಿಸಿದರು. ಸಹಶಿಕ್ಷಕಿ ಸುಜಾತರವರು ಧನ್ಯವಾದ ನೀಡಿದರು. ಸಹಶಿಕ್ಷಕಿಯರಾದ ಜಯಂತಿ,ಪ್ರಮೀಳಾ, ಸಾರಿಕಾರವರು ಸಹಕರಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಾಲಾ ವಿದ್ಯಾರ್ಥಿನಿಯಾದ ಸಹನಾ ಮತ್ತು ಹಳೆ ವಿದ್ಯಾರ್ಥಿಯಾದ ಸುರೇಶ ಇವರು ಕಾರ್ಯಕ್ರಮ ನಿರೂಪಣೆ ಮಾಡಿದರು.













