ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಗೊರೂರು:ಭಾರತ ಮಾತೆಗೆ ಬ್ರಿಟಿಷರ ದಬ್ಬಾಳಿಕೆಯಿಂದ ಮುಕ್ತಿ ದೊರೆತು 77 ವರ್ಷಗಳು ಕಳೆದು 78ನೇ ವರ್ಷದ ಸಂಭ್ರಮಾಚರಣೆಯಲ್ಲಿ ನಾವಿದ್ದೇವೆ. ದೇಶ ಕಂಡ ಅಭೂತಪೂರ್ವ ರಾಷ್ಟ್ರಪ್ರೇಮಿ, ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರ ಮುಂದಾಳತ್ವದಲ್ಲಿ ಅನೇಕ ಹೋರಾಟಗಾರರ ಹೋರಾಟದ ಫಲಶೃತಿಯಾಗಿ ದೇಶ ಸ್ವತಂತ್ರಗೊಂಡಿದೆ ಅವರೆಲ್ಲರ ಹೋರಾಟ ಬಲಿದಾನಗಳನ್ನು ಸ್ಮರಿಸಿಕೊಳ್ಳುತ್ತಾ ಈ ಪುಣ್ಯಭರತವರ್ಷಿಣಿಯಲ್ಲಿ ಜನ್ಮ ಪಡೆದ ನಾವೇ ಧನ್ಯರು, ಇದು ಅರ್ಪಣೆಯ ಭೂಮಿ, ನಾವೆಲ್ಲರೂ ಇಲ್ಲಿ ಜಾತ್ಯಾತೀತವಾಗಿ ಒಗ್ಗೂಡಿ ಬಾಳಿ ಸ್ವಾತಂತ್ರ್ಯಕ್ಕೆ ಹೊಸ ಅರ್ಥ ಕಲ್ಪಿಸಬೇಕು, ವಿದ್ಯಾರ್ಥಿಗಳೇ ಭವ್ಯ ಭಾರತಕ್ಕೆ ಭಾರತಾಂಬೆಗೆ ಧಕ್ಕೆ ಬರೆದಂತೆ ನಾವೆಲ್ಲರೂ ಜವಾಬ್ದಾರಿಯುತ ನಾಗರಿಕರಾಗಿ ದೇಶದ ಸತ್ಪ್ರಜೆಗಳಾಗಿ ಬಾಳಬೇಕಿದೆ ಎಂದು, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಗೊರೂರು ಇಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿಕೊಟ್ಟು ರೇಷ್ಮಾ ಶೆಟ್ಟಿ ಗೊರೂರು ಮಾತನಾಡಿದರು.
ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಶಬನಾ ಗೊರೂರು ಅವರು,ಸ್ವಾತಂತ್ರ್ಯ ದಿನಕ್ಕಷ್ಟೇ ಸಂಭ್ರಮ ಆಗದಿರಲಿ, ಪ್ರತಿದಿನವೂ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳಬೇಕಿದೆ,ಇದು ರಾಷ್ಟ್ರೀಯ ಹಬ್ಬವಾಗಿ ಪ್ರತಿ ಭಾರತೀಯರಿಗೂ ಸಂಭ್ರಮದ ಜ್ಯೋತಕವಾಗಿದೆ ಎನ್ನುತ್ತಾ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ಸರ್ವರಿಗೂ ಶುಭ ಕೋರಿದರು.
ಸಂಸ್ಥೆಯ ಶಿಕ್ಷಕರಾದ ನವೀನ್ ರಾಜ್ ಗೊರೂರು ಅವರು ಮಾತನಾಡುತ್ತಾ ಇಂದಿನ ವಿದ್ಯಾರ್ಥಿಗಳು ನಾಳಿನ ಭವ್ಯ ಭಾರತದ ಪ್ರಜೆಗಳು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಹಾದಿಯನ್ನು ಸ್ಮರಿಸುತ್ತಾ ಜೀವನದಲ್ಲಿ ವಿಜಯ ಸಾಧಿಸಲು ಸ್ವಾತಂತ್ರ್ಯ ಹೋರಾಟಗಾರರನ್ನೇ ಸ್ಫೂರ್ತಿಯಾಗಿಸಿಕೊಳ್ಳೋಣ ಎಂದು ಕರೆಕೊಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕಿ ಮಂಜುಳಾ ಗೊರೂರು ಸರ್ವರನ್ನು ಸ್ವಾಗತಿಸಿದರು, ಶಾಂಭವಿ ಗೊರೂರು ರಾಷ್ಟ್ರಗೀತೆಯನ್ನು ನೆರವೇರಿಸಿ ಕೊಟ್ಟರು, ಜುಬೇದ ಗೊರೂರು ಅವರು ಪ್ರಾರ್ಥಿಸಿದರು,ಹಾಗೂ ಶಿಕ್ಷಕರುಗಳಾದ ಪೂಜಾ, ರಂಜಿತಾ,ಸಮೀನಾ ತಾಜ್, ಸಬಿಹ ಉಪಸ್ಥಿತರಿದ್ದು ರಾಷ್ಟ್ರ ಭಕ್ತಿಗೀತೆಗಳನ್ನು ಹಾಡಿದರು.
ಧ್ವಜಾರೋಹಣದ ಕೊನೆಯಲ್ಲಿ ಮಕ್ಕಳೆಲ್ಲರಿಗೂ ಸಿಹಿ ಹಂಚಿ ವಿದ್ಯಾರ್ಥಿ ನಾಯಕ ವಿಮರ್ಶ್ ಸರ್ವರಿಗೂ ವಂದಿಸಿದರು.













