27.7 C
Udupi
Tuesday, April 21, 2026
spot_img
spot_img
HomeBlogರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ ( ರಿ.) ಸಾಣೂರು.

ರಾಜ್ಯ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ ( ರಿ.) ಸಾಣೂರು.

ಬೈಕ್ ರ್‍ಯಾಲಿಯೊಂದಿಗೆ 78ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಯುವಕ ಮಂಡಲ (ರಿ.) ಸಾಣೂರು.

71 ನೇ ವರ್ಷದ ಸಾಣೂರು ಯುವಕ ಮಂಡಲದಿಂದ ಭಾರತದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಇಂದು ಯುವಕ ಮಂಡಲದಲ್ಲಿ ಆಚರಿಸಲಾಯಿತು.
ಮಂಡಲದ ಅಧ್ಯಕ್ಷರಾದ ಪ್ರಸಾದ್ ಶೆಟ್ಟಿ ಇವರು ಧ್ವಜಾರೋಹಣ ಮಾಡುವುದರೊಂದಿಗೆ ಶುಭ ಹಾರೈಸಿದರು.


ಮಂಡಲದ ಅನೇಕ ಸಮಾಜಮುಖಿ ಕಾರ್ಯಕ್ರಮದೊಂದಿಗೆ ರಾಷ್ಟ್ರೀಯ ಹಬ್ಬವಾದ ಸ್ವಾತಂತ್ರ್ಯ ದಿನಾಚರಣೆಯನ್ನು ದ್ವಿಚಕ್ರ ವಾಹನದ ಮೂಲಕ ರ‍್ಯಾಲಿಯೊಂದಿಗೆ ಊರಿನ ಜನರಿಗೆ ಉತ್ತಮ ಸಂದೇಶ ನೀಡುತ್ತ, ಸ್ವಾತಂತ್ರ್ಯೋತ್ಸವದ ಮಹತ್ವವನ್ನು ಪಸರಿಸಲಾಯಿತು. ದ್ವಿಚಕ್ರ ರ್‍ಯಾಲಿ ಸಾಣೂರು ಯುವಕ ಮಂಡಲದಿಂದ ಪುಲ್ಕೆರಿ ಬೈಪಾಸ್ ವರೆಗೆ ಅಲ್ಲಿಂದ ಸಾಣೂರು ಮುರತಂಗಡಿಗೆ ತೆರಳಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಮಂಡಲದ ಕಚೇರಿ ವರೆಗೆ ನಡೆಸಲಾಯಿತು. ಸುಮಾರು 35 ದ್ವಿಚಕ್ರದೊಂದಿಗೆ ತೆರಳಿ, ಸ್ವಾತಂತ್ರ್ಯೋತ್ಸವದ ಸಂದೇಶವನ್ನು ಸಾರಲಾಯಿತು.

ಈ ಕಾರ್ಯಕ್ರಮದಲ್ಲಿ ಮಂಡಲದ ಮಾಜಿ ಅಧ್ಯಕ್ಷರಾದ ಶ್ರೀ ರಾಘ ಪೂಜಾರಿ, ಗಣೇಶ್ ನಾಯಕ್, ಜಗದೀಶ್ ಕುಮಾರ್, ದೇವಾನಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ಶಂಕರ್ ಶೆಟ್ಟಿ, ಪ್ರಕಾಶ್ ಮಡಿವಾಳ, ಪ್ರಸಾದ್ ಪೂಜಾರಿ ಹಿರಿಯ ಸದಸ್ಯರಾದ ರಾಘು ಸುವರ್ಣ ಮಂಡಲದ ಉಪಾಧ್ಯಕ್ಷರಾದ ಹರೀಶ್ ರಾವ್, ಮಂಡಲದ ಪದಾಧಿಕಾರಿಗಳಾದ ಪ್ರಮಿತ್ ಸುವರ್ಣ, ಪ್ರಶಾಂತ್ ಆಚಾರ್ಯ, ರಾಜೇಶ್ ಪೂಜಾರಿ, ವಿದ್ಯಾನಂದ ಕೋಟ್ಯಾನ್ ರೋಹಿತ್ ಆರ್. ಕೆ, ಸದಸ್ಯರಾದ ಮೋಹನ್ ಶೆಟ್ಟಿ, ಸುನಿಲ್ ಕುಲಾಲ್, ಮುರಳಿದರ ಸುವರ್ಣ, ಸತೀಶ್ ಮಡಿವಾಳ, ಪ್ರಸನ್ನಚಾರ್ಯ, ಸುದರ್ಶನ್ ನಾಯ್ಕ್, ಜಿತೇಶ್ ರಾವ್, ಪವನ್ ರಾವ್, ಅನಿಲ್ ಕೋಟ್ಯಾನ್, ಸ್ವಸ್ತಿಕ್ ಭಂಡಾರಿ, ಜಯನ್ ಶೆಟ್ಟಿ, ಮಂಜುನಾಥ್ ರಾವ್, ಶಿವಪ್ರಸಾದ್ ಶೆಟ್ಟಿಗಾರ್, ಸಮಿತ್ ಆಚಾರ್ಯ, ಸೀತಾರಾಮ್, ವಿಘ್ನೇಶ್ ರಾವ್, ರಾಮಚಂದ್ರ, ನಾರಾಯಣ್ ರಾವ್, ಚಂದ್ರಹಾಸ ಪೂಜಾರಿ, ಮಾಸ್ಟರ್ ಧ್ಯಾನ್, ಶ್ರೀಯಾ, ಧನುಶ್ರೀ, ಶರತ್ ರಾವ್, ದೇವೊಜಿ, ವಿಕೇಶ್ ಶೆಟ್ಟಿ, ಭಾಗವಹಿಸಿದ್ದರು. ಕಾರ್ಯದರ್ಶಿ ಪ್ರಕಾಶ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page