
ತೋಡಾರು:”ಬಡವರ ಸೇವೆಯೇ ದೇವರ ಸೇವೆ” ಎಂಬ ಉದಾತ್ತ ಧ್ಯೇಯ ವಾಕ್ಯದೊಂದಿಗೆ ಸಾಮಾಜಿಕ ರಂಗದಲ್ಲಿ ಗುರುತಿಸಿಕೊಂಡಿರುವ ತೋಡಾರಿನ ನವಚೇತನ ಸೇವಾ ಬಳಗ (ರಿ) ಸಂಸ್ಥೆಯು ಇದೀಗ ಯಶಸ್ವಿಯಾಗಿ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ.
ಸರ್ವ ದಾನಿಗಳ, ಹಿತೈಷಿಗಳ ಹಾಗೂ ಪ್ರೋತ್ಸಾಹಕರ ಪ್ರೀತಿಯ ಸಹಕಾರದೊಂದಿಗೆ ಬೆಳೆದು ಬಂದಿರುವ ಈ ಸಂಸ್ಥೆಯು, ತನ್ನ 7ನೇ ವರ್ಷದ ಸಂಭ್ರಮದ ಪ್ರಯುಕ್ತ ಈ ಬಾರಿಯೂ ಅರ್ಥಪೂರ್ಣ ಸಾಮಾಜಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ ವಿತರಣೆಸಂಸ್ಥೆಯು ತನ್ನ ವಾರ್ಷಿಕ ಸಂಭ್ರಮಾಚರಣೆಯ ಅಂಗವಾಗಿ ಈ ವರ್ಷ ಆಯ್ದ ಮೂರು ಶಾಲೆಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಕಲಿಕಾ ಪುಸ್ತಕಗಳನ್ನು ವಿತರಿಸಲು ನಿರ್ಧರಿಸಿದೆ.
ಶಿಕ್ಷಣಕ್ಕೆ ಉತ್ತೇಜನ ನೀಡುವ ಸಲುವಾಗಿ ಕಳೆದ 5 ವರ್ಷಗಳಿಂದಲೂ ಸಂಸ್ಥೆಯು ಸತತವಾಗಿ ಪ್ರತಿ ವರ್ಷ 200ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುತ್ತಾ ಬಂದಿರುವುದು ಇಲ್ಲಿ ಉಲ್ಲೇಖನೀಯ.ಕೇವಲ ಶಿಕ್ಷಣ ಕ್ಷೇತ್ರ ಮಾತ್ರವಲ್ಲದೆ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೂರಾರು ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ನವಚೇತನ ಸೇವಾ ಬಳಗ ಮಾಡುತ್ತಾ ಬಂದಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಆಸಕ್ತಿ ಮೂಡಿಸಲು ಮತ್ತು ಸಮಾಜದಲ್ಲಿ ಇನ್ನಷ್ಟು ಸಾಧನೆ ಮಾಡಲು ಪ್ರೋತ್ಸಾಹ ನೀಡುತ್ತಿರುವ ಈ ಸಂಸ್ಥೆಯು, ಸಮಾಜದಲ್ಲಿ ಒಂದು ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ
ನವಚೇತನ ಸೇವಾ ಬಳಗವು ಇದುವರೆಗೆ ನಡೆಸಿರುವ ಒಟ್ಟು ಸೇವಾ ಕಾರ್ಯಗಳ ವಿವರ ಹೀಗಿದೆ
ಒಟ್ಟು ಸೇವಾ ಯೋಜನೆಗಳು:193
ವಿನಿಯೋಗಿಸಲಾದ ಒಟ್ಟು ಮೊತ್ತ:55,22,480/-



























