
ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ, ಕಾರ್ಕಳ ಇದರ ತಿಂಗಳ ಕಾರ್ಯಕ್ರಮದಲ್ಲಿ “ಪ್ರವಾಸ ಕಥನ ” ಮಾಲಿಕೆಯು 30. 9.2024 ರಂದು ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನೆರವೇರಿತು.
ವೇದಿಕೆಯ ಹಿರಿಯ ಸದಸ್ಯೆಯರಾದ ಶ್ಯಾಮಲಾ ಗೋಪಿನಾಥ್, ಸಾವಿತ್ರಿ ಮನೋಹರ್, ಸುಲೋಚನಾ ತಿಲಕ್, ಮತ್ತು ಇಂದಿರಾ ಇವರು ತಾವು ಕೈಗೊಂಡ ಕಾಶ್ಮೀರ, ಅಂಡಮಾನ್, ದುಬೈ ಮತ್ತು ಲಂಡನ್ ಪ್ರವಾಸದ ಅದ್ಭುತ, ಅವಿಸ್ಮರಣೀಯ ಅನುಭವಗಳನ್ನು ಹಂಚಿಕೊಂಡರು ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ಅಧ್ಯಕ್ಷೆ ಶ್ರೀಮತಿ ಮಿತಪ್ರಭಾ ಹೆಗ್ಡೆ ಯವರು ಸ್ವಾಗತಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಮಾಲತಿ. ಜಿ. ಪೈಯವರು ನಿರ್ವಹಿಸಿದರು. ಡಾ. ಸುಮತಿ. ಪಿ.ಧನ್ಯವಾದವನ್ನಿತ್ತರು.













