
ದಿನಾಂಕ 9.02.2025ನೇ ಆದಿತ್ಯವಾರದಂದು ಕಾರ್ಕಳದ ಅರಂತಲಾಯ ಅರಮನೆಯಲ್ಲಿ ಏಳುನಾಡು ಕಾಬೆಟ್ಟು ಅರಸರು ಪಾರಂಪರಿಕವಾಗಿ ನಡೆಸಿಕೊಂಡು ಬರುತ್ತಿರುವ ಅರಮನೆಯ ಪಟ್ಟದ ರಾಜನ್ ದೈವ ಶ್ರೀ ವರಾಹಮೂರ್ತಿ ಪಂಜುರ್ಲಿ ದೈವದ ಸೀಮೆ ದೊಂಪದ ಬಲಿ ನೇಮೋತ್ಸವವು ನಡೆಯಲಿದೆ.
ಸಂಜೆ 5:30ಕ್ಕೆ ಭಂಡಾರ ಇಳಿಯಲಿದ್ದು ಪಾರಂಪರಿಕ ಪಟ್ಟದ ಕಾರ್ಯಕ್ರಮ ಹಾಗೂ ರಾತ್ರಿ 8 ಗಂಟೆಯಿಂದ ನೇಮೋತ್ಸವವು ನಡೆಯಲಿದೆ. ರಾತ್ರಿ 7:30ಕ್ಕೆ ಅನ್ನ ಸಂತರ್ಪಣೆ ಜರುಗಲಿದ್ದು ಈ ನೇಮೋತ್ಸವಕ್ಕೆ ಶ್ರೀ ನೋನಯ್ಯ ಹೆಗ್ಗಡೆ ಏಳುನಾಡು ಕಾಬೆಟ್ಟು, ಕುಟುಂಬಸ್ಥರು ಹಾಗೂ ಹತ್ತು ಸಮಸ್ತರು ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.





















