
ಕಾರ್ಕಳದ ಶಿವತಿಕೆರೆಯಲ್ಲಿ ಫೆ. 3ರಂದು ಹಾಡಹಗಲೇ ಮಾರಣಾಂತಿಕ ಹಲ್ಲೆ ನಡೆದಿದೆ. ಮಹಮ್ಮದ್ ರಿಜ್ವಾನ್ ಎಂಬಾತನಿಗೆ ಆತನ ಹೆಂಡತಿಯ ಅಣ್ಣ ಅಶ್ರಫ್ ಕತ್ತಿಯಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ತಲೆ, ಕುತ್ತಿಗೆ ಮತ್ತು ಕಾಲಿಗೆ ಇರಿದ ಪರಿಣಾಮವಾಗಿ ರಿಜ್ವಾನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಶ್ರಫ್ನ ತಂಗಿ ಮೈಮುನಾ 2017ರಲ್ಲಿ ರಿಜ್ವಾನ್ನನ್ನು ಮದುವೆಯಾಗಿದ್ದು, ಗಂಡನ ಮನೆಯವರ ಕಿರುಕುಳದಿಂದ ಬೇಸತ್ತು 2023 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಹಿಂದೆಯೂ ಮೈಮುನಾ ತನ್ನ ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರು ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ದೂರು ದಾಖಲಾಗಿತ್ತು. ಈ ಪ್ರಕರಣವು ಇದೀಗ ಮತ್ತೊಂದು ಹಿಂಸಾತ್ಮಕ ತಿರುವು ಪಡೆದುಕೊಂಡಿದೆ.





















