28.1 C
Udupi
Thursday, May 7, 2026
spot_img
spot_img
HomeBlog2009ರಲ್ಲಿ ನಕ್ಸಲ್ ಚಳುವಳಿ ತೊರೆದು ಆಂದ್ರಪ್ರದೇಶ ಸರ್ಕಾರಕ್ಕೆ ಶರಣಾದೆ: ಲಕ್ಷ್ಮಿ ಪತಿಯ ಮಾತು

2009ರಲ್ಲಿ ನಕ್ಸಲ್ ಚಳುವಳಿ ತೊರೆದು ಆಂದ್ರಪ್ರದೇಶ ಸರ್ಕಾರಕ್ಕೆ ಶರಣಾದೆ: ಲಕ್ಷ್ಮಿ ಪತಿಯ ಮಾತು

ಉಡುಪಿ: ಮುಖ್ಯವಾಹಿನಿಗೆ ಬಂದು ಶರಣಾದ ಮಾಜಿ ನಕ್ಸಲ್ ತೊಂಬಟ್ಟು ಲಕ್ಷ್ಮಿ ಅವರ ಪತಿ ಸಂಜೀವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ನಕ್ಸಲ್ ಚಳುವಳಿ ತಪ್ಪು ಎಂದು ನನ್ನ ಮನಸಿಗೆ ಅನ್ನಿಸಿದ ತಕ್ಷಣ ನಾನು ಅದರಿಂದ ಹೊರ ಬಂದಿದ್ದೇನೆ. 2009ರಲ್ಲಿ ಆಂದ್ರಪ್ರದೇಶದ ಸರ್ಕಾರದ ಮುಂದೆ ನಕ್ಸಲ್ ಚಳುವಳಿ ತೊರೆದು ಶರಣಾದ ಬಳಿಕ ನನ್ನ ಮೇಲೆ ಇದ್ದ ಎಲ್ಲಾ ಕೇಸುಗಳನ್ನು ತೆಗೆದು ಹಾಕಿದೆ ಎಂದು ಹೇಳಿದ್ದಾರೆ.

ನಾನು ಕರ್ನಾಟಕದ ಪಾವಗಡದವನಾಗಿದ್ದು ಕಳೆದ ಹಲವಾರು ವರ್ಷಗಳಿಂದ ಆಂದ್ರಪ್ರದೇಶದಲ್ಲಿ ನೆಲೆಸಿದ್ದೇನೆ. ನನ್ನ ಪತ್ನಿ 2006 ರಿಂದ ನಕ್ಸಲ್ ಚಳುವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು 2008ರಲ್ಲಿ ನಮ್ಮ ಮದುವೆ ಆಯಿತು. ನಾನು 2009 ರಲ್ಲಿ ಆಂದ್ರಪ್ರದೇಶ ಸರ್ಕಾರದ ಮುಂದೆ ಶರಣಾಗಿದ್ದು ಇದೀಗ ನನ್ನ ಪತ್ನಿಯೂ ಕೂಡ ಸಿದ್ದರಾಮಯ್ಯ ಅವರ ನಕ್ಸಲ್ ಶರಣಾಗತಿ ಪ್ಯಾಕೇಜ್ ಅನ್ವಯ ಶರಣಾಗಿದ್ದಾರೆ ಎಂದು ಹೇಳಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page