ಕಾರ್ಕಳ ತಾಲೂಕು ಬಂಟ ಮಹಿಳಾ ಸಂಘ ಕಾರ್ಕಳ
ಮೇ. 17, ದಶಮಾನೋತ್ಸವ ಸಂಭ್ರಮ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ
ಬಂಟ್ಸ್ ಹಾಸ್ಟೆಲ್, ಅನಂತಶಯನ ಕಾರ್ಕಳ

ದಿನಾಂಕ ಮೇ 17 ಭಾನುವಾರದಂದು ಬಂಟರ ಯಾನೆ ನಾಡವರ ಮಾತೃ ಸಂಘ ರಿ. ಮಂಗಳೂರು ಇದರ ಕಾರ್ಕಳ ತಾಲೂಕು ಸಮಿತಿಯ ಸಹಭಾಗಿತ್ವದಲ್ಲಿ ತಾಲೂಕಿನ ಬಂಟ ಮಹಿಳಾ ಸಂಘದ ದಶಮಾನೋತ್ಸವ ಸಂಭ್ರಮಾಚರಣೆ ಮತ್ತು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.
ಕಾರ್ಕಳದ ಅನಂತಶಯನ ಬಂಟ್ಸ್ ಹಾಸ್ಟೆಲ್ ನಲ್ಲಿ ಈ ಸಂಭ್ರಮಾಚರಣೆ ನಡೆಯಲಿದ್ದು ಬೆಳಗ್ಗೆ 7:30ಕ್ಕೆ ನಾಗಾರಾಧನೆ, 08:00 ರಿಂದ ಶ್ರೀ ಸತ್ಯನಾರಾಯಣ ಪೂಜೆ, 9:30 ರಿಂದ ಕಾರ್ಕಳ ಬಂಟ ಮಹಿಳಾ ಸದಸ್ಯರಿಂದ ಭಜನೆ ಹಾಗೂ 10:00ಗೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

ಬೆಳಗ್ಗೆ 10:30 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಡಾ. ಆಶಾ ಜ್ಯೋತಿ ಅಜಿತ್ ರೈ ಮಾಲಾಡಿ ಅವರು ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸಭಾಧ್ಯಕ್ಷರಾಗಿ ಶ್ರೀಮತಿ ಜ್ಯೋತಿ ಸುನಿಲ್ ಕುಮಾರ್ ಶೆಟ್ಟಿ ಭಾಗವಹಿಸಲಿದ್ದು, ಶ್ರೀ ಕ್ಷೇತ್ರ ಕೇಮಾರು ವಿನ ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿಯವರು ಆಶೀರ್ವಚನ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ, ಜಯಕರ್ ಶೆಟ್ಟಿ ಇಂದ್ರಾಳಿ, ಉದಯಕುಮಾರ್ ಶೆಟ್ಟಿ ಮುನಿಯಾಲು, ಉದ್ಯಮಿ ಗಿರೀಶ್ ಶೆಟ್ಟಿ ತೆಳ್ಳಾರು, ಸತೀಶ್ ಶೆಟ್ಟಿ ಪಟ್ಲ, ಹರೀಶ್ ಶೆಟ್ಟಿ, ರಮೇಶ್ ಜಿ ಶೆಟ್ಟಿ, ಗೋಪಾಲಕೃಷ್ಣ ಶೆಟ್ಟಿ, ಸುಹಾಸ್ ಹೆಗ್ಡೆ ನಂದಳಿಕೆ ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 1:30ಕ್ಕೆ ಅನ್ನಸಂತರ್ಪಣೆ ನಡೆಯಲಿದ್ದು 2:00 ಯಿಂದ ಸ್ವಸಮಾಜ ಬಂಧುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 4:00ಯಿಂದ ಕಾರ್ಕಳ ತಾಲೂಕು ಬಂಟ ಮಹಿಳಾ ಸದಸ್ಯರಿಂದ ಹಾಗೂ ಮಕ್ಕಳಿಂದ ಪಾಂಚಜನ್ಯ ಕನ್ನಡ ಪೌರಾಣಿಕ ಯಕ್ಷಗಾನ ನಡೆಯಲಿದೆ.























